ಎಚ್.ಡಿ.ಪುರದಲ್ಲಿ ಗುಂಡಿನ ಸೇವಾ ಕಾರ್ಯಕ್ಕೆ ಸಿದ್ಧತೆ

HDPura, Lakshmi Narasimha Swamy, Pooja program
Published on

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಎಚ್.ಡಿ.ಪುರದ ಐತಿಹಾಸಿಕ ದೇಗುಲ ಲಕ್ಷ್ಮೀನರಸಿಂಹ ಸ್ವಾಮಿಗೆ ಫೆ. 6, 7ರಂದು ನಡೆಯಲಿರುವ ಅನ್ನದಕೋಟೆ ಮತ್ತು ಗುಂಡಿನ ಸೇವಾ ಪೂಜಾ ಕಾರ್ಯಕ್ರಮಕ್ಕೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗುವುದು ಎಂದು ಹೊಳಲ್ಕೆರೆ ವೃತ್ತ ನಿರೀಕ್ಷಕ ರವೀಶ್ ತಿಳಿಸಿದರು.

ಪೂಜಾ ಕಾರ್ಯಕ್ರಮದ ಅಂಗವಾಗಿ ಗುರುವಾರ ಎಚ್.ಡಿ.ಪುರದಲ್ಲಿ ಆಯೋಜಿಸಿದ್ದ ರೂಪುರೇಷೆಗಳ ಕುರಿತು ಸಭೆಯಲ್ಲಿ ಮಾತನಾಡಿದರು. ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ ಇರುವ ಕಾರಣ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ದೇಗುಲದ ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಡಿ.ರಂಗಯ್ಯ ಮಾತನಾಡಿ, ಅನ್ನದಕೋಟೆ ಮತ್ತು ಗುಂಡಿನ ಸೇವಾ ಪೂಜಾ ಕಾರ್ಯಕ್ರಮದ ಅಂಗವಾಗಿ ಈಗಾಗಲೇ ಸಿದ್ಧತೆ ಆರಂಭವಾಗಿದ್ದು, ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸ್ವಾಮಿಯ ಕರೆಕಲ್ಲು ಬೆಟ್ಟದಲ್ಲಿ ಜ.22ರಿಂದ ಫೆ. 10ರ ವರೆಗೆ ಬೇರೆ ಯಾವ ಕಾರ್ಯಕ್ರಮಗಳು ಇರುವುದಿಲ್ಲ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಶಿಲ್ಪಾ, ಎಚ್.ಆನಂದ್, ದೇವರಾಜ್, ಎಚ್.ನಾಗರಾಜ್, ಜಿ.ಎನ್.ಶೇಷಾದ್ರಿ, ದಿವಾಕರ್, ಪಿ.ಎಲ್.ಪ್ರಕಾಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net