ಎಚ್ ಡಿಎನ್ ಕೆಯಿಂದ ಶಿಕ್ಷಕರಿಗೆ ಜ್ಞಾನಗೌರವ ಪ್ರಶಸ್ತಿ

IMG-20250705-WA0023.jpg
Published on

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ನಾರ್ತ್ ಕರ್ನಾಟಕ (ಎಚ್ ಡಿಎನ್ ಕೆ) ಸಹೋದಯ ಸಂಸ್ಥೆಯ ವತಿಯಿಂದ ಧಾರವಾಡದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸಿಬಿಎಸ್ ಸಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಅವರಿಗೆ ಮಾರ್ಗದರ್ಶಿಯಾದ ಶಿಕ್ಷಕರಿಗೆ ಜ್ಞಾನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜೆಎಸ್ಎಸ್ ಸಂಸ್ಥೆಯ ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯ ಕಾರ್ಯಕ್ರಮ ಉದ್ಘಾಟಿಸಿದರು.
ಎಚ್ ಡಿಎನ್ ಕೆ ಅಧ್ಯಕ್ಷೆ ಶುಭಾಂಗಿ ಮೋರೆ, ಖಜಾಂಚಿ ರಜನಿ ಪಾಟೀಲ್, ಕಾರ್ಯದರ್ಶಿ ಮನೋಜ ಭಟ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಿಬಿಎಸ್ ಸಿ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಆ ಶಾಲೆಗೆ ಪ್ರಥಮ ಬಂದಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ, ಆಧುನಿಕತೆಯ ಜಂಜಾಟದಲ್ಲಿ ಮಕ್ಕಳು ಶಿಕ್ಷಣದ ಕಡೆ ಏಕಾಗ್ರತೆ ವಹಿಸಲು ಸಹಕರಿಸಿದ ಪಾಲಕರಿಗೆ ಧನ್ಯವಾದ ತಿಳಿಸಲಾಯಿತು.
ಉಪಾಧ್ಯಕ್ಷ ಮಂಜುನಾಥ ಮಾನ್ವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net