

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಕೇಶ್ವಾಪುರ ಬಾರಾಕೊಟ್ರಿಯಲ್ಲಿ ಅನಧಿಕೃತವಾಗಿ ನಿರ್ವಿುಸಲಾಗಿದ್ದ 6 ಅಂಗಡಿಗಳನ್ನು ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ತೆರವುಗೊಳಿಸಿದರು.
ಇವು ಸಿಮೆಂಟ್, ಇಟ್ಟಿಗೆ ಬಳಸಿ ಕಟ್ಟಲಾಗಿದ್ದ ಶಾಶ್ವತ ನಿರ್ವಣಗಳಾಗಿದ್ದವು. ಇಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಅಡ್ಡಿಯಾಗಿ ರಸ್ತೆ ಬದಿ ಅನಧಿಕೃತವಾಗಿ ಅಂಗಡಿಗಳನ್ನು ನಿರ್ವಿುಸಲಾಗಿದ್ದವು. ಇಂದು ಬೆಳಗ್ಗೆ ಜೆಸಿಬಿ ಬಳಸಿ ಅನಧಿಕೃತ ನಿರ್ವಣವನ್ನು ತೆರವುಗೊಳಿಸಲಾಗಿದೆ.
ಇಲ್ಲಿಯ ಅಂಗಡಿ ಮಾಲೀಕರಿಗೆ ತೆರವುಗೊಳಿಸುವಂತೆ 2 ಬಾರಿ ನೋಟಿಸ್ ನೀಡಲಾಗಿತ್ತು ಎಂದು ವಲಯ ಕಚೇರಿ 6ರ ಸಹಾಯಕ ಆಯುಕ್ತ ಎಸ್.ಸಿ. ಬೇವೂರ ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಇತರರು ಇದ್ದರು.
ಇದೇ ವೇಳೆ ವಾರ್ಡ್ ನಂ. 44ರ ವ್ಯಾಪ್ತಿಯ ಸುಭಾಷನಗರದಲ್ಲಿ ರಸ್ತೆ ಬದಿ ಅನಧಿಕೃತವಾಗಿ ಹಾಕಲಾಗಿದ್ದ 2 ಶೆಡ್ಗಳನ್ನು ತೆರವುಗೊಳಿಸಲಾಗಿದೆ. ಎಇಇ ಚೈತ್ರಾ ಸಾಲಿಮಠ, ನಗರ ಯೋಜನೆ ಶಾಖೆಯ ವಿರೇಶ ಸವಡಿ ಇದ್ದರು.