ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಕರ್ನಾಟಕ ರಾಜ್ಯೋತ್ಸವ ನಿಮಿತ್ತ 23 ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ 70 ಜನರಿಗೆ ಧೀಮಂತ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ.
ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಪಾಲಿಕೆ ವ್ಯಾಪ್ತಿಯ ನಿವಾಸಿಯಾಗಿರಬೇಕು. ಅರ್ಜಿ ಸಲ್ಲಿಸುವ ಸಂಘ ಸಂಸ್ಥೆಗಳು ಪಾಲಿಕೆ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿರಬೇಕು. ಅರ್ಜಿಯೊಂದಿಗೆ ಸಾಧನೆ ಮಾಡಿದ ಬಗ್ಗೆ ಅಗತ್ಯ ದಾಖಲೆಗಳು ಹಾಗೂ ಕಡ್ಡಾಯವಾಗಿ ತಮ್ಮ ವಿಳಾಸವನ್ನು ದೃಢೀಕರಿಸುವ ದಾಖಲೆಯನ್ನು ಸಲ್ಲಿಸಬೇಕು. ಪ್ರಶಸ್ತಿ ಆಯ್ಕೆಯಲ್ಲಿ ಪಾಲಿಕೆ ನಿರ್ಣಯವೇ ಅಂತಿಮವಾಗಿರುವುದು.
ಅರ್ಜಿಗಳನ್ನು ಪಾಲಿಕೆಯ ಉಪ ಮಹಾಪೌರರ ಕಚೇರಿ ಅಥವಾ ಕಮಿಟಿ ಸದಸ್ಯರ ಮುಖಾಂತರ ಪಡೆದು ಅಕ್ಟೋಬರ್ 29ರೊಳಗೆ ಸಲ್ಲಿಸಬೇಕು ಎಂದು ಧೀಮಂತ ಸನ್ಮಾನ ಸಮಿತಿ ಸದಸ್ಯ ಕಾರ್ಯದರ್ಶಿ ಡಾ. ಶ್ರೀಧರ ದಂಡಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.