

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ದಾಖಲಾಗಿರುವ ವಿವಿಧ ಪ್ರಕರಣಗಳ ಕುರಿತು ಇಲ್ಲಿಯ ಕೆಯುಐಡಿಎಫ್ಸಿ ಸಭಾಂಗಣದಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ಸಭೆ ನಡೆಯಿತು.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ನ್ಯಾಯಾಲಯದ ಪ್ರಕರಣಗಳಲ್ಲಿ ಯಾವುದೇ ರೀತಿಯ ತೊಂದರೆಗಳು ಎದುರಾದಲ್ಲಿ ಪಾಲಿಕೆಯ ವಕೀಲರನ್ನು ಸಂರ್ಪಸಿ ಪರಿಹಾರ ಕೊಂಡುಕೊಳ್ಳಬೇಕು ಹಾಗೂ ಯಾವುದೇ ಕಾರಣದಿಂದ ನ್ಯಾಯಾಲಯ ನಿಂದನಾ ಪ್ರಕರಣಗಳು ದಾಖಲಾಗದಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಅಧಿಕಾರಿಗಳ ನಿಷ್ಕಾಳಜಿತನದಿಂದ ನ್ಯಾಯಾಂಗ ನಿಂದನಾ ಪ್ರಕರಣಗಳು ದಾಖಲಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೈಕೋರ್ಟ್ ನ್ಯಾಯವಾದಿ ಗುರುದೇವ ಗಚ್ಚಿನಮಠ ಪಾಲಿಕೆಯ ಪರ ಮತ್ತು ವಿರುದ್ಧವಾಗಿ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳ ಕುರಿತು ಮಾಹಿತಿ ನೀಡಿದರು. ನ್ಯಾಯಾಲಯ ಪ್ರಕರಣಗಳಲ್ಲಿ ಎದುರಾಗುತ್ತಿರುವ ತೊಂದರೆಗಳ ಕುರಿತು ರ್ಚಚಿಸಿದರು. ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ವಿಶ್ವನಾಥ ಪಿ.ಬಿ., ಕಾರ್ಯನಿರ್ವಾಹಕ ಇಂಜಿನಿಯರ್ಗಳಾದ ವಿಜಯಕುಮಾರ್ ಆರ್., ಸಂತೋಶ ಯರಂಗಳಿ, ಪಾಲಿಕೆ ವಕೀಲರಾದ ಅಜಯ ಹಿರೇಮಠ, ಬಸವರಾಜ ತಂಗಾಯ್, ವಲಯ ಕಚೇರಿ ಸಹಾಯಕ ಆಯುಕ್ತರಾದ ಗಿರೀಶ ತಳವಾರ, ರಮೇಶ ನೂಲ್ವಿ, ಇತರರು ಇದ್ದರು.