ಡಾ. ಈಶ್ವರ ಎಚ್ ಡಿಎಂಸಿ ಆಯುಕ್ತರು

IMG-20230706-WA0012-1.jpg
Published on

ಹುಬ್ಬಳ್ಳಿ; ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ಹಿರಿಯ ಕೆಎಎಸ್ ಅಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಅವರನ್ನು ನೇಮಕ ಮಾಡಿ ಗುರುವಾರ ಆದೇಶ ಹೊರಡಿಸಲಾಗಿದೆ.

ಡಾ. ಗೋಪಾಲಕೃಷ್ಣ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇವರನ್ನು ಸರ್ಕಾರ ನೇಮಕ ಮಾಡಿದೆ.

ಬುಧವಾರವಷ್ಟೇ ಐಎಎಸ್ ಅಧಿಕಾರಿ, ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ ಎಸ್. ಅವರಿಗೆ ಮಹಾನಗರ ಪಾಲಿಕೆ ಆಯುಕ್ತರೆಂದು ಸಹವತಿರ್ ಜವಾಬ್ದಾರಿ ನೀಡಲಾಗಿತ್ತು. ಸರ್ಕಾರ ಒಂದೇ ದಿನದಲ್ಲಿ ಈ ತಾತ್ಕಾಲಿಕ ವ್ಯವಸ್ಥೆಯ ಆದೇಶ ಕೈಬಿಟ್ಟು, ಉಳ್ಳಾಗಡ್ಡಿ ಅವರ ನೇಮಕ ಮಾಡಿದೆ.

ಬೆಳಗಾವಿಯ ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ ಯೋಜನಾ ನಿರ್ದೇಶಕರಾಗಿದ್ದ ಉಳ್ಳಾಗಡ್ಡಿ ಅವರು ಇದೀಗ ಮಹಾನಗರ ಪಾಲಿಕೆ ಆಯುಕ್ತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net