ಹತಾಶೆಗೊಂಡ ಎಚ್‌ಡಿಕೆ ಅವರು ಇಲ್ಲದ ಆರೋಪ ಮಾಡುವುದು ಬಿಟ್ಟು ತಮ್ಮವರನ್ನು ಉಳಿಸಿಕೊಳ್ಳಲಿ

ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಎರಡು ಪಕ್ಷಗಳನ್ನು ಕನ್ನಡಿಗರು ತಿರಸ್ಕರಿಸಿದ್ದಾರೆ. ಹೀಗಾಗಿ ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಸ್ವಂತ ಶಕ್ತಿಯ ಮೇಲೆ ಗೆಲ್ಲಲು ಆಗಲ್ಲ ಎಂಬುದು ಗೊತ್ತಾಗಿರುವುದರಿಂದಲೇ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿವೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ ಧರ್ಮಸಿಂಗ್ ಹೇಳಿದರು.
20230906_121455
Published on

ಗೆಲ್ಲಲ್ಲು ಆಗಲ್ಲ ಎಂಬುದು ಗೊತ್ತಾಗಿಯೇ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಸಿಂಗ್

ವಿಜಯವಾಣಿ ಸುದ್ದಿಜಾಲ ಕಲಬುರಗಿ
ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಎರಡು ಪಕ್ಷಗಳನ್ನು ಕನ್ನಡಿಗರು ತಿರಸ್ಕರಿಸಿದ್ದಾರೆ. ಹೀಗಾಗಿ ಬರಲಿರುವ
ಲೋಕಸಭೆ ಚುನಾವಣೆಯಲ್ಲಿ ಸ್ವಂತ ಶಕ್ತಿಯ ಮೇಲೆ ಗೆಲ್ಲಲು ಆಗಲ್ಲ ಎಂಬುದು ಗೊತ್ತಾಗಿರುವುದರಿಂದಲೇ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿವೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ ಧರ್ಮಸಿಂಗ್ ಹೇಳಿದರು.


ನಗರದ ಸೂಪರ್ ಮಾರ್ಕೇಟ್‌ನಲ್ಲಿರುವ ಕೆಕೆಸಿಸಿಐ (ಚೇಂಬರ್) ಸಭಾಂಗಣದಲ್ಲಿ  ಪದಾಧಿಕಾರಿಗಳು ಹಾಗೂ ವಾಣಿಜ್ಯೋಧ್ಯಮಿಗಳೊಂದಿಗೆ ಸೋಮವಾರ ರಾತ್ರಿ ಚರ್ಚೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಜೆಡಿಎಸ್  ಗೆಲ್ಲುವ ಶಕ್ತಿ ಕಡಿಮೆಯಾಗಿದೆ ಹೀಗಾಗಿಯೇ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.


ಜೆಡಿಎಸ್ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹತಾಶೆಗೊಂಡಿದ್ದರಿAದಲೇ ಸಿಎಂ ಸಿದ್ದರಾಮಯ್ಯ ಅವರ ಕುರಿತು ಇಲ್ಲದ ಆರೋಪ ಮಾಡುತ್ತಿದ್ದಾರೆ.  ಬಿಜೆಪಿ ಕದ ತಟ್ಟಿದ್ದರೂ ಎಂಬುದು ಶುದ್ಧ ಸುಳ್ಳು. ಇಲ್ಲದ ಆರೋಪ ಮಾಡುವುದನ್ನು ಅವರು ನಿಲ್ಲಿಸಿ, ತಮ್ಮವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ ಎಂದು ತಿಳಿಸಿದರು.


ಕೋಮುವಾದಿ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಜೆಡಿಎಸ್ ಪಕ್ಷವರು ತಾವು ಸೆಕ್ಯೂಲರ್ ಅಂತ ಯಾಕೆ ಹೇಳಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ. ೧೯೮೯ ಚುನಾವಣೆಯ ಬಳಿಕ ಇಷ್ಟೊಂದು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿದೆ. ಇದರಿಂದಾಗಿ ಸಹಿಸಿಕೊಳ್ಳಲು ಆಗದ ಕುಮಾರಸ್ವಾಮಿ ಹಾಗೂ ಬಿಜೆಪಿಯವರು ಸಿಎಂ ಹಾಗೂ ಪಕ್ಷದ ವಿರುದ್ಧ ಇಲ್ಲದ ಆರೋಪ ಮಾಡುತ್ತಿರಬಹುದು ಎಂದರು.


ಹಳೆಯ ವಿಷಯಗಳ ಕೆದಕುವುದರಿಂದ ಏನು ಪ್ರಯೋಜವಿಲ್ಲ. ಹಿಂದೇ  ಏನಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಪ್ರಶ್ನೆಯೊಂದಕ್ಕೆ ಅಜಯಸಿಂಗ್ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net