ಎಚ್‌ಡಿಕೆ ಶಾಸ್ತ್ರ ಹೇಳ್ತಾರಾ? ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಪ್ರಶ್ನೆ

MLA-N.mahesh
Published on

ಚಾಮರಾಜನಗರ: ಈ ಬಾರಿ ಬಿಜೆಪಿ ಅಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶಾಸ್ತ್ರ ಹೇಳುತ್ತಾರಾ ಅಥವಾ ಅವರು ನಮ್ಮ ಪಕ್ಷದ ಅಧ್ಯಕ್ಷರಾ ಎಂದು ಶಾಸಕ ಎನ್.ಮಹೇಶ್ ಪ್ರಶ್ನಿಸಿದರು.
ನಗರದ ಪತ್ರಕರ್ತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಾರನ್ನ ಮುಖ್ಯಮಂತ್ರಿ ಮಾಡಬೇಕು ಎನ್ನುವುದು ಜೆಡಿಎಸ್ ತೀರ್ಮಾನವಲ್ಲ. ಕುಮಾರಸ್ವಾಮಿ ಅವರು ಶಾಸ್ತ್ರ-ಗಿಸ್ತ್ರ ಹೇಳ್ತಾರಾ ? ಅವರೇನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾ ? ನಮ್ಮ ಹೈಕಮಾಂಡ್ ಬಲಿಷ್ಠವಾಗಿದೆ. ಯಾರನ್ನ ಮುಖ್ಯಮಂತ್ರಿ ಮಾಡಬೇಕೆಂದು ತೀರ್ಮಾನ ಕೈಗೊಳ್ಳುತ್ತೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಪ್ರತಿಕ್ರಿಯಿಸಿದರು.
ನಾನು ಹಿಂದುಗಳ ದ್ವೇಷಿಯಲ್ಲ ಹಿಂದುತ್ವದ ವಿರೋ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಿಂದು ಧರ್ಮದ ತತ್ತ್ವಗಳನ್ನು ಯಾರು ಪಾಲನೆ ಮಾಡುತ್ತಾರೋ ಅವರು ಹಿಂದುಗಳು. ಹಿಂದುತ್ವ ಎಂದರೆ ಹಿಂದು ಧರ್ಮದ ತತ್ತ್ವ ಆದರ್ಶ ಪಾಲಿಸುವುದು. ನಾನು ಬೌದ್ದ ಧರ್ಮ ಪಾಲನೆ ಮಾಡುತ್ತೇನೆ ಹೀಗಾಗಿ ನಾನು ಬೌದ್ದ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net