

ಬೆಳಗಾವಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸ್ವತಂತ್ರರು. ಅವರು ಯಾರ ಜತೆಗಾದರೂ ಸೇರಿ ಲೋಕಸಭಾ ಚುನಾವಣೆ ಮಾಡಬಹುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ನಿಂತ ನೀರಲ್ಲ. ಯಾವಾಗ ಬೇಕಾದರೂ ಬದಲಾಗಬಹುದು ಎಂದರು
ಸಹಕಾರ ಇಲಾಖೆಯಲ್ಲಿ ಅವ್ಯವಹಾರ ಆಗಿದೆ ಎಂದು ರಸ್ತೆಯಲ್ಲಿ ಮಾತನಾಡುವವರ ಬಗ್ಗೆ ಉತ್ತರಿಸಲು ಸಾಧ್ಯವಿಲ್ಲ. ಸಹಕಾರಿ ಬ್ಯಾಂಕ್, ಬೇರೆ ಬೇರೆ ಸಹಕಾರ ಸಂಸ್ಥೆಗಳು ಉತ್ತಮ ರೀತಿಯಲ್ಲಿ ನಡೆದಿವೆ. ಎಲ್ಲಿಯಾದರೂ ದೂರುಗಳು ಬಂದರೆ ತತ್ವರಿತ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಅವರು, " ಸರ್ಕಾರ ವರ್ಗಾವಣೆ ದಂಧೆ ನಡೆಸುತ್ತಿದೆ" ಎಂದ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಅವರು, 'ಬೊಮ್ಮಾಯಿ ಅವರು ತಮ್ಮಸರ್ಕಾರ ನಡೆಸಿದ್ದ ಆಧಾರದ ಮೇಲೆ ಹೇಳಿರಬೇಕು ನಮ್ಮ ಸರ್ಕಾರದಲ್ಲಿ ಅಂಥದ್ದೇನು ಇಲ್ಲ' ಎಂದು ಆರೋಪ ತಳ್ಳಿಹಾಕಿದರು.