ಎಚ್‌ಡಿಕೆ ಮೂಲಕ ಸರ್ಕಾರಕ್ಕೆ ವರದಿ

17SND-02
Published on

ಸಿಂಧನೂರು: ಸರ್ಕಾರ ಕೂಡಲೇ ಬರ ಪರಿಹಾರ ಕಾಮಗಾರ ಆರಂಭಿಸಬೇಕು. ಅಕಾಲಿಕ ಮಳೆಯಿಂದಾಗಿರುವ ಬೆಳೆ ನಷ್ಟದ ಪರಿಹಾರ ನೀಡಬೇಕೆಂದು ಮಾಜಿ ಸಚಿವ ವೆಂಕಟರಾವ ನಾಡಗೌಡ ಆಗ್ರಹಿಸಿದರು.

ಮಣ್ಣಿಕೇರಿ ಕ್ಯಾಂಪ್, ಗಾಂಧಿನಗರ ಸೇರಿ ಇತರೆಡೆ ಜೆಡಿಎಸ್ ಬರ ಅಧ್ಯಯನ ತಂಡದೊಂದಿಗೆ ಭೇಟಿ ನೀಡಿ ಶುಕ್ರವಾರ ಮಾತನಾಡಿದರು. ಬರಗಾಲದಿಂದಾಗಿ ಎಲ್ಲೂ ಸಮರ್ಪಕ ಬೆಳೆ ಇಲ್ಲದಂತಾಗಿದೆ. ಜೋಳದ ಬೆಳೆ ಒಣಗಿದೆ. ಅಕಾಲಿಕ ಮಳೆಯಿಂದ ಭತ್ತ, ಕಡಲೆ ಬೆಳೆ ನಷ್ಟವಾಗಿದೆ. ಬರಗಾಲ ಹಾಗೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿರುವ ಸಮಗ್ರ ವರದಿ ತಯಾರಿಸಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ವೆಂಕಟರಾವ ನಾಡಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net