ಕುಮಾರಸ್ವಾಮಿ ಈಗಲೂ... ಮುಂದೆಯೂ ನನ್ನ ಸ್ನೇಹಿತ ಎಂದ ಡಿಕೆಶಿ

dks hdk
Published on

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್​ ಮತ್ತು ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಡಿಕೆಶಿ ಮತ್ತು ಎಚ್​ಡಿಕೆ ಅವರನ್ನ ಹಳೇ ದೋಸ್ತಿಗಳು ಎನ್ನುವುದು ವಾಡಿಕೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತಿದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಇದೀಗ ನೀಡಿರುವ ಹೇಳಿಕೆ.

' ಈ ಇಸ್ ಮೈ ಗುಡ್ ಫ್ರೆಂಡ್, ಟುಡೇ ಆಲ್ಸೋ... ಟುಮಾರೋ ಆಲ್ಸೋ...' ಎಂದು ಕುಮಾರಸ್ವಾಮಿ ಕುರಿತು ಡಿಕೆಶಿ ಹೇಳಿದ್ದಾರೆ. 'ಸಂಪದ್ಭರಿತ ಖಾತೆ ಕಾರಣಕ್ಕಾಗಿ ಸಮ್ಮಿಶ್ರ ಸರ್ಕಾರ ಇರಬೇಕು ಎಂದು ಡಿಕೆಶಿ ಬಯಸಿದ್ರು' ಎಂದಿದ್ದ ಎಚ್​ಡಿಕೆ ಮಾತಿಗೆ ಸದಾಶಿವನಗರ ನಿವಾಸದಲ್ಲಿ ತಿರುಗೇಟು ನೀಡಿದ ಶಿವಕುಮಾರ್​, 'ಅವರನ್ನೇಕೆ ಹಳೇ ದೋಸ್ತಿ ಅಂತೀರಾ? ನಾನು ದ್ವೇಷ ಮಾಡಲ್ಲ, ಎಲ್ಲ ಬಿಟ್ಟುಬಿಟ್ಟಿದ್ದೀನಿ. ಕುಮಾರಸ್ವಾಮಿ ಈಗಲೂ ನನ್ನ ಸ್ನೇಹಿತರು, ಮುಂದೆಯೂ ನನ್ನ ಸ್ನೇಹಿತರು' ಎಂದರು.

ನಾನು ಬಂಡೆಯೂ ಅಲ್ಲ, ಮರಳೂ ಅಲ್ಲ, ಜಲ್ಲಿಯೂ ಅಲ್ಲ. ಆದರೂ ಉಪಯೋಗಿಸಿಕೊಂಡಿದ್ದಾರೆ ಎಂದ ಡಿಕೆಶಿ, ನನಗ್ಯಾಕೆ ನೋವಾಗಬೇಕು? ಜೆಡಿಎಸ್ ಬಗ್ಗೆ ನಾನೇಕೆ ಮಾತಾಡಲಿ? ಅವರದ್ದು ಒಂದು ಪಕ್ಷ, ಅವರನ್ನೇಕೆ ಡಿಗ್ರೇಡ್ ಮಾಡೋದು ಹೇಳಿ... ಸಿಎಂ ಮತ್ತು ಅವರ ಅಡ್ಜೆಸ್​ಮೆಂಟ್ ಏನೇನಿದೆಯೋ ಗೊತ್ತಿಲ್ಲ ಎಂದು ಮಾತಿನಲ್ಲೇ ತಿವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net