

ಮಂಡ್ಯ: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನವರು ನಾಲ್ಕು ವರ್ಷ ಏನು ಮಾಡುತ್ತಿದ್ದರು. ಅದರಲ್ಲಿ ನನ್ನ ಪಾತ್ರ ಏನಿದೆ. ಆದ್ದರಿಂದ ಅದು ಉತ್ತರ ಕೊಡುವ ವಿಚಾರವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಉರಮಾರಕಸಲಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿನೋಟಿಫಿಕೇಷನ್ ವಿಚಾರವಾಗಿ ನನ್ನ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸುತ್ತಿದೆ. ಆದರೆ ನನಗೂ ಇದಕ್ಕೂ ಏನು ಸಂಬಂಧ?. ಅವರಿಗೆ ಕನ್ನಡ ಓದುವುದಕ್ಕೆ ಬರುತ್ತದೆಯೇ?. ಹಾಗಿದ್ದರೆ ಆ ಪೇಪರ್ ಅನ್ನು ಸರಿಯಾಗಿ ಕುಳಿತು ನೋಡಲು ಹೇಳಿ. ಅದರಲ್ಲಿ ಏನಿದೆ. ಅವರೇನೂ ಹುಚ್ಚರಾ ರಾಜೀನಾಮೆ ಕೇಳಲು ಎಂದು ವಾಗ್ದಾಳಿ ನಡೆಸಿದರು.
ಅವರು ಕೇಳಿದರೂ ಎಂದು ರಾಜೀನಾಮೆ ಕೊಡಬೇಕಾ. ಏಕೆ ತಪ್ಪು ಮಾಡಿದ್ದೇನೆ ಎಂದು ರಾಜೀನಾಮೆ ಕೊಡಬೇಕು. ಅವರು ಸರಿಯಾಗಿ ದಾಖಲೆಗಳನ್ನ ನೋಡಿದ್ದಾರಾ. ಯಾವಾನೋ ಬರೆದುಕೊಟ್ಟಿದ್ದಾರೆ, ಅದಕ್ಕೆ ಬಂದು ತುತ್ತೂರಿ ಊದಿದ್ದಾರೆ. ತನಿಖೆ ಮಾಡಲಿ ಎಂದರು.