ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಖಾಡಕ್ಕಿಳಿದ ಎಚ್‌.ಡಿ.ರೇವಣ್ಣ: ಅಚ್ಚರಿ ಮೂಡಿಸಿದ ನಾಮಪತ್ರ ಸಲ್ಲಿಕೆ

HD Revanna submitted nomination papers mandya
Published on

ಮಂಡ್ಯ: ಹೈವೋಲ್ಟೇಜ್ ಕ್ಷೇತ್ರ ಮಂಡ್ಯದಿಂದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಇದರ ಬೆನ್ನಲೇ ಎಚ್.ಡಿ.ರೇವಣ್ಣ ಹೆಸರಿನ ವ್ಯಕ್ತಿಯೊಬ್ಬರು ಕೂಡ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ.
ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಕೋಡಿಹಳ್ಳಿ ಗ್ರಾಮದ ದೊಡ್ಡೇಗೌಡ ಅವರ ಮಗ ನಲವತ್ತೆಂಟು ವರ್ಷದ ಎಚ್.ಡಿ.ರೇವಣ್ಣ ಪೂರ್ವಾಂಚಲ್‌ ಮಹಾ ಪಂಚಾಯತ್ ಪಾರ್ಟಿಯಿಂದ ಸ್ಪರ್ಧೆ ಬಯಸಿ ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಎರಡು ಲಕ್ಷ ರೂ‌ ನಗದು ಸೇರಿದಂತೆ ಆರು ಲಕ್ಷ ರೂ ಮೌಲ್ಯದ ಆಸ್ತಿಯನ್ನು ರೇವಣ್ಣ ಘೋಷಣೆ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net