

ಹಾಸನ: ಜೆಡಿಎಸ್ ವರಿಷ್ಠರಿಗೆ ತೀವ್ರ ತಲೆ ನೋವಾಗಿ ಪರಿಣಮಿಸಿರುವ ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಈಗ ಹೊಸ ಬಾಂಬ್ ಒಂದು ಸ್ಪೋಟಗೊಂಡಿದ್ದು ಪತ್ನಿಗೆ ಟಿಕೆಟ್ ಕೊಡದಿದ್ದರೆ ನನಗೂ ಬೇಡ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಈ ಕುರಿತು ಹಾಸನದಲ್ಲಿ ಪಕ್ಷದ ಹಿರಿಯ ಮುಖಂಡರು ಹಾಗೂ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ರೇವಣ್ಣ ತಮ್ಮ ಪತ್ನಿಗೆ ಹಾಸನದಿಂದ ಟಿಕೆಟ್ ನೀಡದಿದ್ದಲ್ಲಿ ತಾವು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಎದುರಿಸಲು ಜೆಡಿಎಸ್ನಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ಧಾರೆ. ಒಂದು ವೇಳೆ ಈಗೆ ಮಾಡಿದರೆ ಕಾರ್ಯಕರ್ತರಿಗೆ ಅನಾಥ ಪ್ರಜ್ಞೆ ಕಾಡುತ್ತದೆ.
ಹೀಗಾಗಿ ಬಿಜೆಪಿ ವಿರುದ್ಧ ಹೋರಾಡಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಇಲ್ಲವಾದಲ್ಲಿ ಪಕ್ಷ ಗೆಲ್ಲುವುದು ಸುಲಭದ ಮಾತಲ್ಲ. ಏನೇ ಆಗಲಿ ಪಕ್ಷ ಗೆಲ್ಲಬೇಕು ಎಂದು ಸಭೆಯಲ್ಲಿ ರೇವಣ್ಣ ಪ್ರತಿಪಾದಿಸಿದ್ದಾರೆ.
ಹಾಸನ ಕ್ಷೇತ್ರವನ್ನು ಈ ಬಾರಿ ಶತಾಯ ಗತಾಯ ಪಕ್ಷದ ತೆಕ್ಕೆಗೆ ವಾಪಸ್ ಹಾಕಿಕೊಳ್ಳಬೇಕು ಎಂದು ರೇವಣ್ಣ ಪಣ ತೊಟ್ಟಿದ್ದು ತಮಕ್ಮ ಪತ್ನಿ ಭವಾನಿ ಅವರಿಗೆ ಟಿಕೆಟ್ ಕೊಡದಿದ್ದಲ್ಲಿ ತಾವು ಹೊಳೆನರಸೀಪುರದಿಂದ ಸ್ಪರ್ದಿಸುವುದಿಲ್ಲ ಎಂದು ಗೋಷಿಸಿದ್ದಾರೆ.
ಈ ಕುರಿತು ಸಹೋದರ ಎಚ್.ಡಿ.ಬಾಲಕೃಷ್ಣ, ಹಿರಿಯ ಮುಖಂಡರು ಹಾಗೂ ಆಪ್ತರ ಮೂಲಕ ದೇವೇಗೌಡರಿಗೆ ಸಂದೇಶವನ್ನು ರವಾನಿಸಿದ್ದಾರೆ.
ಟಿಕೆಟ್ ಹಂಚಿಕೆ ಕುರಿತು ರೇವಣ್ಣ ಅಸಮಾಧಾನ ಬೆನ್ನಲ್ಲೇ ದೇವೇಗೌಡರು ಮದ್ಯಪ್ರವೇಶಿಸಿದ್ದು ಆತುರದ ನಿರ್ಧಾರವನ್ನು ಕೈಗೊಳ್ಳದಂತೆ ಹೇಳಿದ್ದಾರೆ. ಗೊಂದಲಕ್ಕೆ ಅವಕಾಶ ನಿಡದಂತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ರೇವಣ್ಣರಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ಭವಾನಿ ರೇವಣ್ಣ ಹಾಸನ ವಿಚಾರವಾಗಿ ಪಟ್ಟು ಸಡಿಲಿಸುತ್ತಿಲ್ಲ ಮತ್ತು ಪುತ್ರರಿಬ್ಬರು ತಮ್ಮ ತಾಯಿಗೆ ಟಿಕೆಟ್ ನೀಡುವಂತೆ ಎಚ್.ಡಿ.ಕೆ ಹಾಗೂ ಎಚ್.ಡಿ.ಡಿ ಮೇಲೆ ನಿರಂತರವಾಗೊ ಒತ್ತಡ ಹೇರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರೇವಣ್ಣ ಹೊಸ ದಾಳವನ್ನು ಉರುಳಿಸುವ ಮೂಲಕ ಜೆಡಿಎಸ್ ವರಿಷ್ಠರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದಾರೆ.