

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಇಂದು ನಿರುದ್ಯೋಗ ಸಮಸ್ಯೆ ಬೃಹತ್ ಪ್ರಮಾಣದಲ್ಲಿ ಕಾಡುತ್ತಿದೆ, ಇದೊಂದು ಪಿಡುಗಾಗಬಾರದು ಈ ಹಿನ್ನೆಲೆಯಲ್ಲಿ ರಾಷ್ಟ್ರ ಮತ್ತು ರಾಜ್ಯದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಸಲು ಅದ್ಯತೆ ನೀಡಲಾಗುವುದು ಈ ವಿಷಯಲ್ಲಿ ಸಮಯ ವ್ಯರ್ಥ ಮಾಡುವುದಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿ ತಿಳಿಸಿದರು.
ದೇವನಹಳ್ಳಿ ತಾಲೂಕು ಸಾದಹಳ್ಳಿ ಟೋಲ್ ಗೇಟ್ ಬಳಿ ಶುಕ್ರವಾರ ಜೆಡಿಎಸ್ ಮುಖಂಡರಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಬೃಹತ್ ಕೈಗಾರಿಕೆ ಸಚಿವನಾಗಿರುವುದರಿಂದ ಉದ್ಯೋಗ ಸೃಷ್ಟಿ ಮಾಡಲು ಮುಕ್ತ ಅವಕಾಶವಿದೆ. ಇದನ್ನು ಸದ್ಭಳಕೆ ಮಾಡಿಕೊಂಡು ದೊಡ್ಡ ಮಟ್ಟದಲ್ಲಿ ಉದ್ಯೋಗ ದೊರಕಿಕೊಡುವತ್ತ ಗಮನ ನೀಡುತ್ತೇನೆ ಎಂದು ಭರವಸೆ ನೀಡಿದರು.
ಅಲ್ಲಿ ಇಲ್ಲಿ ಎನ್ನಬೇಡಿ: ರಾಜ್ಯದ ಯುವಕರು ಎಲ್ಲೆ ಉದ್ಯೋಗ ದೊರೆತರೂ ಹೋಗಬೇಕು. ಅಲ್ಲಿ ಇಲ್ಲಿ ಎಂದು ಮೀನಮೇಷ ಎಣಿಸಬಾರದು ಎಂದು ಎಚ್‌ಡಿಕೆ ಸಲಹೆ ನೀಡಿದರು. ಪ್ರತೀ ಇಲಾಖೆಯಲ್ಲಿ ರಾಜ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು. ನಾಲ್ಕು ದಿವಸ ದೆಹಲಿಯ ನನ್ನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆ. ಎರಡು ದಿನ ರಾಜ್ಯದಲ್ಲಿ ಇರುತ್ತೇನೆ. ಬೇರೆ ರಾಜ್ಯಗಳಿಗೆ ಮತ್ತು ಕಾರ್ಖಾನೆಗಳಿಗೆ ಹೋಗಿ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹಾರ ಮಾಡಲು ಒತ್ತುಕೊಡಲಾಗುವುದು ಎಂದರು. ಮಂಡ್ಯದಲ್ಲಿ ಒಂದು ದಿವಸ ಅಲ್ಲಿನ ಜನರ ಕಷ್ಟ ಮತ್ತು ಸಮಸ್ಯೆಗಳನ್ನು ಆಲಿಸುತ್ತೇನೆ. ಪ್ರಧಾನಿ ಅವರು ಎರಡು ದೊಡ್ಡ ಖಾತೆಗಳ ಜವಾಬ್ದಾರಿ ನೀಡಿದ್ದಾರೆ. ನಾನು ಕೃಷಿ ಸಚಿವನಾಗಿ ಕೆಲಸ ಮಾಡಲಿ ಎಂಬುದು ನಿಮ್ಮೆಲ್ಲರ ಬಯಕೆಯಾಗಿತ್ತು ಆದರೆ ಅದರ ಬದಲು ಬೃಹತ್ ಕೈಗಾರಿಕೆ ಖಾತೆ ಸಿಕ್ಕಿದೆ. ಈ ಖಾತೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದೇನೆ ಜತೆಗೆ ಕೃಷಿ ಸಚಿವರ ಗಮನಕ್ಕೆ ತಂದು ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.
ನಿಖಿಲ್‌ಗೆ ಹೆಚ್ಚಿನ ಜವಾಬ್ದಾರಿ: ನಿಖಿಲ್ ಕುಮಾರಸ್ವಾಮಿಗೆ ಹೆಚ್ಚಿನ ಜವಾಬ್ದಾರಿಗಳಿವೆ. ರಾಜ್ಯದ ಜನರ ಸಮಸ್ಯೆಗಳನ್ನು ಆಲಿಸಬೇಕು. ರಾಜ್ಯದಲ್ಲಿ ಎಲ್ಲೇ ಕರೆದರೂ ನಿಖಿಲ್ ಹೋಗಿ ಬರಬೇಕು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಎಚ್‌ಡಿಕೆ ಹೇಳಿದರು. ಲೋಕಸಭಾ ಚುನಾವಣೆ ಸಮಯದಲ್ಲಿ ರಾಜ್ಯ ರಾಜಕಾರಣ ಯಾವ ರೀತಿ ನಡೆಯಿತು ಎಂಬುವುದು ಎಲ್ಲರಿಗೂ ಗೊತ್ತಿದೆ. ಎಲ್ಲವನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಅದರಲ್ಲೂ ವಿಶೇಷವಾಗಿ ರಾಮನಗರ ಮತ್ತು ಮಂಡ್ಯ ಜಿಲ್ಲೆಯ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಚನ್ನಪಟ್ಟಣದ ಜನತೆ ತಮ್ಮನ್ನು ಲೋಕಸಭೆಗೆ ಕಳಿಸಲು ಮನವಿ ಮಾಡಿದಾಗ ಒಪ್ಪಿಗೆ ಸೂಚಿಸಿದರು. ಜೆಡಿಎಸ್ ಅನ್ನು ಮುಗಿಸುತ್ತೇವೆ ಎಂದು ದುರಹಂಕಾರದಲ್ಲಿ ಮಾತನಾಡಿದವರಿಗೆ ಉತ್ತರ ಕೊಡುವುದಿಲ್ಲ ನನಗೆ ಬೇಕಾಗಿರುವುದು ರಾಜಕೀಯವಲ್ಲ ರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಷ್ಟೇ ಆಗಿದೆ ಎಂದು ಹೇಳಿದರು.
ಜಾತಿ ಧರ್ಮಕ್ಕೆ ಸೀಮಿತನಲ್ಲ: