

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ಹಿರಿಯ ಪತ್ರಕರ್ತ ಪಿ.ಕೆ. ಚನ್ನಕೃಷ್ಣ ಪೋಲಂಪಲ್ಲಿ ಅವರು ನೇಮಕಗೊಂಡಿದ್ದಾರೆ.
ಚನ್ನಕೃಷ್ಣ ಅವರು ಸುಮಾರು ಎರಡೂವರೆ ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ರಾಜ್ಯದ ಹಲವು ಪ್ರಮುಖ ದೈನಿಕಗಳಲ್ಲಿ ವರದಿಗಾರ, ಮುಖ್ಯ ಉಪಸಂಪಾದಕ ಮುಂತಾದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಕಳೆದ ಜುಲೈ 6ರಂದು ಎಚ್.ಡಿ.ಕುಮಾರಸ್ವಾಮಿ ಅವರ ಮಾಧ್ಯಮ ಸಲಹೆಗಾರ ಕೆ.ಸಿ. ಸದಾನಂದ ಹೃದಯಾಘಾತದಿಂದ ನಿಧನರಾದರು.