ಲಕ್ಷ್ಮೀ ವರದರಾಜಸ್ವಾಮಿ ಬ್ರಹ್ಮ ರಥೋತ್ಸವ

bnk ratha-1
ಲ್ಗುಣಿ ಗ್ರಾಮದ ಕೋಳೂರು ಸಾವಿರದ ಶ್ರೀ ಕಲಾನಾಥೇಶ್ವರಸ್ವಾಮಿ ರಥೋತ್ಸವ ನಡೆಯಿತು.
Published on

 ಎಚ್.ಡಿ. ಕೋಟೆ : ಪಟ್ಟಣದಲ್ಲಿರುವ ಪ್ರಸಿದ್ಧ ಶ್ರೀ ಲಕ್ಷ್ಮೀ ವರದರಾಜಸ್ವಾಮಿ 13ನೇ ವರ್ಷದ ಬ್ರಹ್ಮ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.

ಭೂ ನೀಳಾ ಮತ್ತು ಮಹಾಲಕ್ಷ್ಮೀ ಸಮೇತ ಶ್ರೀ ಲಕ್ಷ್ಮಿ ವರದರಾಜ ಸ್ವಾಮಿ ಉತ್ಸವ ಮೂರ್ತಿಗಳನ್ನು ಬೆಳಗ್ಗೆ 7 25.ರೊಳಗೆ ಸಲ್ಲುವ ವೃಷಭ ಲಗ್ನದಲ್ಲಿ ರಥದಲ್ಲಿ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ರಥವನ್ನು ವಿವಿಧ ಹೂಗಳಿಂದ ಸಿಂಗರಿಸಿ ಮಂಗಳವಾದ್ಯ, ನಗಾರಿ, ದಾಸಯ್ಯನ ಕುಣಿತಗಳ ಮೂಲಕ ಮೆರವಣಿಗೆ ಮಾಡಲಾಯಿತು. ದೇವಾಲಯದಿಂದ ಹೊರತ ತೇರು ಕೋಟೆ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ದೇವಾಲಯ ತಲುಪಿತು. ಶ್ರೀ ಲಕ್ಷ್ಮೀ ವರದರಾಜ ಸ್ವಾಮಿ ರಥವನ್ನ ಎಳೆಯಲು ಹೆಚ್ಚು ಮಹಿಳೆಯರೇ ಭಾಗವಹಿಸಿದ್ದು ವಿಶೇಷವಾಗಿತ್ತು. ರಥ ಸಾಗುವ ದಾರಿ ಉದ್ದಕ್ಕೂ ಹರಕೆ ಹೊತ್ತ ನೂರಾರು ಭಕ್ತರು ಗೋಪುರದ ಕಳಸಕ್ಕೆ ಹಣ್ಣು, ದವನ ಎಸೆದು ಭಕ್ತಿ, ಭಾವ ಮೆರೆದರು. ಭಕ್ತಾದಿಗಳಿಗೆ ದಾರಿ ಉದ್ದಕ್ಕೂ ಪಾನಕ, ಮಜ್ಜಿಗೆ ವಿತರಿಸಲಾಯಿತು. ರಥೋತ್ಸವ ಹಾದಿಯಲ್ಲಿ ಮಹಿಳೆಯರು ಹಾಗೂ ಯುವಕರು ತಮಟೆ ಸದ್ದಿಗೆ ಹೆಜ್ಜೆ ಹಾಕಿದರು. ಸಾವಿರಾರು ಭಕ್ತರಿಗ ದೇವಾಲಯ ಆವರಣದಲ್ಲಿ ಮಹಾ ಪ್ರಸಾದ ವಿನಿಯೋಗ ಮಾಡಲಾಯಿತು. ಬ್ರಹ್ಮರಥೋತ್ಸವದ ಅಂಗವಾಗಿ ಏ. 29ರಿಂದಲೇ ದಿನನಿತ್ಯ ವಿವಿಧ ಪೂಜಾ ಕಾರ್ಯಕ್ರಮಳು ಸಂಪನ್ನಗೊಂಡವು. ವಿವಿಧ ಸಮುದಾಯ, ಸಮಾಜಗಳಿಂದ ಶೇಷ ವಾಹನ ಉತ್ಸವ, ಸಮರ ಭೂಪಾಲ, ಸೂರ್ಯಮಂಡಲ, ಚಂದ್ರಮಂಡಲ, ಪುಷ್ಪ ಮಂಟಪಾರೋಹಣ, ಗರುಡ ವಾಹನ, ಆನೆ ವಸಂತೋತ್ಸವ ಸೇವೆಗಳ ಮೂಲಕ ಶ್ರೀ ವರದರಾಜ ಸ್ವಾಮಿಯನ್ನು ಆರಾಧಿಸಲಾಯಿತು. ದೇವಾಲಯದ ಸಮಿತಿ ಕಾರ್ಯದರ್ಶಿ ತಿರುಮಲ ಆಚಾರ್, ದೇವರಾಜ್, ವೆಂಕಟೇಶ ಪ್ರಸಾದ್, ಶ್ರೀಕಾಂತ್, ಜಯಂತ, ಪೂರ್ಣೇಶ್, ಪ್ರಮೋದ್, ಅರ್ಚಕರಾದ ವಿನಯ್ ವಾದ್ಯಯರ್, ಶ್ರೀಧರ ಮೂರ್ತಿ, ಶ್ರೀನಿಧಿ, ಸುಧಾಕರ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net