

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ತನ್ನ ರಜತ ಮಹೋತ್ಸವದ ನಿಮಿತ್ತ ಆಯೋಜಿಸಿರುವ ಟ್ವೆಂಟಿ-20 ಕ್ರಿಕೆಟ್ ಟೂರ್ನಾಮೆಂಟ್ನ ಪ್ರಶಸ್ತಿ ಪ್ರದಾನ ಸಮಾರಂಭ ಏ. 14ರಂದು ಮಧ್ಯಾಹ್ನ 12 ಗಂಟೆಗೆ ದೇಶಪಾಂಡೆನಗರ ಕೆಜಿಎ ಮೈದಾನದಲ್ಲಿ ನಡೆಯಲಿದೆ.
ಎಲ್ಪಿನ್ ಗ್ರುಪ್ನ ಸಾಜಿದ್ ಫರಾಸ್, ಶಾಲಿನಿ ಎಂಟರಪ್ರೖೆಸಿಸ್ನ ಬಿ. ದಿನೇಶ ಪೈ, ವಿಭವ ಇಂಡಸ್ಟ್ರೀಸ್ನ ಎಚ್.ಎನ್. ನಂದಕುಮಾರ, ಹಾಂಗ್ಯೋ ಐಸ್ಕ್ರೀಮ್ ಬ್ರಯಾನ್ ಡಿಸೋಜಾ ಹಾಗೂ ಕೆಎಸ್ಸಿಎ ಧಾರವಾಡ ವಲಯ ಅಧ್ಯಕ್ಷ ವೀರಣ್ಣ ಸವಡಿ ಪಾಲ್ಗೊಳ್ಳುವರು.