ಸೇವಾ ಭದ್ರತೆ ಒದಗಿಸಲು ಪಟ್ಟು: ಹಬೊಹಳ್ಳಿಯಲ್ಲಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನೆ

03102020 HB Halli Leasing-outsourcing employees protest
Published on

ಹಗರಿಬೊಮ್ಮನಹಳ್ಳಿ: ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕಿನ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘ ಶನಿವಾರ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ತಾಲೂಕಿನಲ್ಲಿ 15 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ 105 ಜನ ಗುತ್ತಿಗೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು ಸೇವಾ ಭದ್ರತೆ ಒದಗಿಸಬೇಕು. ಕರೊನಾ ಸೋಂಕಿತರ ಸರ್ವೇ ಹಾಗೂ ಚಿಕಿತ್ಸೆ ನೀಡಲು ಗುತ್ತಿಗೆ ನೌಕರರು ಕುಟುಂಬವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸಿದ್ದಾರೆ. ಹಲವರು ಸೋಂಕಿಗೆ ಒಳಗಾಗಿ ಚೇತರಿಸಿಕೊಂಡು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದು, ಸರ್ಕಾರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಎಂ.ಲಿಂಗರಾಜ, ಮುಖಂಡರಾದ ಡಾ.ಎಚ್.ಎಂ.ಮಲ್ಲಿಕಾರ್ಜುನ, ಟಿ.ಜಯಪ್ಪ, ಬಿ.ಗಿರೀಶ್, ಲಿಂಗನಗೌಡ ಪಾಟೀಲ್, ಅಂದಾನಪ್ಪ, ವೀಣಾ ಕುಮಾರಿ, ಕೆ.ಎಂ.ಶಿಲ್ಪಾ, ಎಂ.ಡಿ.ಮಂಜುಳಾ, ಕೆ.ರೇಷ್ಮಾ, ಡಿ.ಮಮತಾ, ಪಿ.ಸುವರ್ಣ, ಸುಮಾ ಪ್ರಕಾಶ್, ಭಾಗ್ಯಮ್ಮ, ಕರಿಯಮ್ಮ, ಸರೋಜಾ, ಎಲ್.ಲಕ್ಷ್ಮೀ, ಕೆ.ಮಹಾದೇವಿ, ದೀಪಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net