

ಮುಂಡರಗಿ: ತಾಲೂಕಿನ ಕಲಕೇರಿ ಗ್ರಾಮದ ಹಜರತ್ ಸೈಯದ್‌ಬಾಷಾ ರಹಮತುಲ್ಲಾ ಅಲೈ ಅವರ ಉರುಸ್ ಫೆ.15ರಿಂದ 17ರವರೆಗೆ ನಡೆಯಲಿದೆ. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ದರ್ಗಾ ಕಮಿಟಿ ಅಧ್ಯಕ್ಷ ಎಂ.ಯು. ಮಕಾಂದಾರ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.15ರಂದು ರಾತ್ರಿ 10ಗಂಟೆಗೆ ಗಂಧದ ಮೆರವಣಿಗೆ ನಡೆಯುವುದು. ಫೆ.16ರಂದು ಮಧ್ಯಾಹ್ನ 12ಗಂಟೆಗೆ ಅಕ್ಕಿ ಬಂಡಿ ಮೆರವಣಿಗೆ, ರಾತ್ರಿ 10ಗಂಟೆಗೆ ಉರುಸಿನ ಮೆರವಣಿಗೆ ನಡೆಯಲಿದೆ. ರಾತ್ರಿ 10.30 ಗಂಟೆಗೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವಿದ್ದು, ಬೆಳಗಟ್ಟಿ ಶ್ರೀ ಹಜರತ್ ಮುಸ್ತಫಾಖಾದರಿ ಸಾಹೇಬರು, ಶ್ರೀ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಿಪಿಐ ಮಂಜುನಾಥ ಕುಸುಗಲ್ಲ ಉದ್ಘಾಟಿಸುವರು. ಕಲಕೇರಿ ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷ ಆರ್.ಎಂ. ಖತೀಬ ಅಧ್ಯಕ್ಷತೆ ವಹಿಸುವರು. ಪಿ.ಎಂ. ಪಾಟೀಲ, ಶಿವಲಿಂಗಯ್ಯ ಗುರುವಿನ, ಕೊಟ್ರಪ್ಪ ದೇಸಾಯಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
17ರಂದು ಬೆಳಗ್ಗೆ 11.30ಗಂಟೆಗೆ ಧರ್ಮಸಭೆ ಜರುಗುವುದು. ಶ್ರೀ ಹಜರತ್ ಮುಸ್ತಫಾಖಾದರಿ ಸಾಹೇಬರು, ಶ್ರೀ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೂವಿನಶಿಗ್ಲಿ ಶ್ರೀ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸುವರು. ದರ್ಗಾ ಕಮಿಟಿ ಅಧ್ಯಕ್ಷ ಎಂ.ಯು. ಮಕಾಂದಾರ ಅಧ್ಯಕ್ಷತೆ ವಹಿಸುವರು. ಜಹೀರುದ್ದಿನ್ ಮುಲ್ಲಾ ಪ್ರಾಸ್ತಾವಿಕ ನುಡಿಗಳನ್ನಾಡುವರು ಎಂದರು.
ವಿ.ಎಲ್. ನಾಡಗೌಡ್ರ, ಎಸ್.ಡಿ. ಮಕಾಂದಾರ, ನಾಗರಾಜ ಹೊಂಬಳಗಟ್ಟಿ, ರಾಜು ದಾವಣಗೇರಿ, ಸಾಧೀಕ್ ಮಕಾಂದಾರ, ಬಾಬುಜಾನ್ ಅಳವಂಡಿ, ಮೈಬುಬ್‌ಸಾಬ್ ಮಕಾಂದಾರ, ಎಂ.ಎ. ಮಾಳೆಕೊಪ್ಪ, ಆಶಿಂಪೀರ್ ಲಕ್ಷ್ಮೇಶ್ವರ ಇತರರಿದ್ದರು.