ಇಂದಿನಿಂದ ಹಜರತ್ ಹಾಜಿಮಸ್ತಾನ್ ಜಾತ್ರೆ

TIKOTA 16-1
ಹಾಜಿಮಸ್ತಾನ್ ದರ್ಗಾ
Published on

ತಿಕೋಟಾ: ಪಟ್ಟಣದ ಹಜರತ್ ಹಾಜಿಮಸ್ತಾನ್ ದರ್ಗಾ ಜಾತ್ರೆ ಜೂ. 17 ರಿಂದ ಜೂ. 19ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಜೂ. 17 ರಂದು ರಾತ್ರಿ 8ಕ್ಕೆ ರಾಮು ದೇಸಾಯಿ ಅವರ ಮನೆಯಿಂದ ವಿವಿಧ ವಾದ್ಯಮೇಳದೊಂದಿಗೆ ಗಂಧ ಒಯ್ಯುವ ಕಾರ್ಯಕ್ರಮ ನಡೆಯಲಿದೆ.

ಜೂ. 18 ರಂದು ರಾತ್ರಿ 8 ಗಂಟೆಗೆ ಡಾ. ಮಲ್ಲನಗೌಡ ಮಾದಪ್ಪಗೌಡ ಪಾಟೀಲ ಅವರ ಮನೆಯಿಂದ ನೈವೇದ್ಯ ಮತ್ತು ಗಲೀಫ್ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10ಕ್ಕೆ ದರ್ಗಾ ಆವರಣದಲ್ಲಿ ತೌಶೀಫ್ ಜುವೇದ್ ಪುಣೆ ಅವರಿಂದ ಕವಾಲಿ ನಡೆಯಲಿದೆ. ಅಂದೇ ರಾತ್ರಿ 10 ಕ್ಕೆ ವಾಡೆ ಆವರಣದಲ್ಲಿ ಶ್ರೀ ಗಜಾನನ ಉತ್ಸವ ಸಮಿತಿ ಹಳೇ ಪಂಚಾಯಿತಿ ಆಶ್ರಯದಲ್ಲಿ ಸ್ಥಳೀಯ ಶ್ರೀ ಜೈ ಹನುಮಾನ ನಾಟ್ಯ ಸಂಘದಿಂದ 15ನೇ ಕಲಾ ಕುಸುಮ ‘ ತಾಯಿಯ ಋಣ ಮಣ್ಣಿನ ಗುಣ’ ನಾಟಕ ನಡೆಯಲಿದೆ.

ಜೂ.19 ಬೆಳಗ್ಗೆ 10ಕ್ಕೆ ಎತ್ತಿನ ಗಾಡಿ ರೇಸ್, ಜೋಡು ಕುದುರೆ ಸ್ಪರ್ಧೆ, ಸಂಜೆ 4ಕ್ಕೆ ಜಂಗೀ ಕುಸ್ತಿ, ರಾತ್ರಿ 10ಕ್ಕೆ ಹಳೇ ಬಸ್ ಸ್ಟಾೃಂಡ್ ಗೆಳೆಯರ ಬಳಗದ ವತಿಯಿಂದ ರಸಮಂಜರಿ ನಡೆಯಲಿದೆ ಎಂದು ಜಾತ್ರೆ ಕಮಿಟಿ ಅಧ್ಯಕ್ಷ ಜೀವಪ್ಪ ಕುರ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net