1.64 ಲಕ್ಷ ರೂ. ಮೌಲ್ಯದ 8.24 ಕೆ.ಜಿ. ಗಾಂಜಾ ವಶ

Crime Logo
Published on

ಹಾವೇರಿ: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಇಲ್ಲಿಯ ಸೈಬರ್ ಕೆಂ ಠಾಣೆ ಪೊಲೀಸರು 5 ಜನರನ್ನು ಬಂಧಿಸಿ 1.64 ಲಕ್ಷ ರೂ. ಮೌಲ್ಯದ 8 ಕೆ.ಜಿ. ಗಾಂಜಾ ವಶಪಡಿಸಿಕೊಂಡ ಟನೆ ಮಂಗಳವಾರ ನಡೆದಿದೆ.

ನಗರದ ನಾಗೇಂದ್ರಮಟ್ಟಿಯ ಯಾಸೀನ ಮಹ್ಮದ್ ನಾಶಿಪುಡಿ, ನೂರ್ ಹಾವೇರಿ, ನಾಸೀರಲಾಲ ಹಾವೇರಿ, ಹಾನಗಲ್ಲ ತಾಲೂಕಿನ ಅಕ್ಕಿಆಲೂರ ಗ್ರಾಮದ ಇಬ್ರಾಹಿಂ ಮಹ್ಮದ್ ಇಸ್ಮಾಯಿಲ್ ಮಂಡಕ್ಕಿ, ನಿಸ್ಸಾರ ಅಹ್ಮದ್ ಹಿರೇಕೌಂಶಿ ಬಂಧಿತ ಆರೋಪಿತರು. ಇವರಿಂದ 1.64 ಲಕ್ಷ ರೂ. ಮೌಲ್ಯದ 8.24 ಕೆ.ಜಿ. ಗಾಂಜಾ, ಒಂದು ಮೊಬೈಲ್, ಎರಡು ಲಗೇಜ್ ಬ್ಯಾಗ್ ಜಪ್ತಿ ಮಾಡಲಾಗಿದೆ.

ಇವರು ಹಾನಗಲ್ಲ ರಸ್ತೆಯ ಎನ್ಎಚ್-&48ರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸೈಬರ್ ಕೆಂ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಸೈಬರ್ ಕೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಉಪ ಅಧೀಕ್ಷಕಿ ಪ್ರಗ್ಯಾ ಆನಂದ, ಪೊಲೀಸ್ ಇನ್ಸಪೆಕ್ಟರ್ ಶಿವಶಂಕರ ಗಣಾಚಾರಿ, ಸಿಬ್ಬಂದಿ ಎಂ.ಎ್. ದುರಗಪ್ಪನವರ, ಎಚ್.ಎಂ. ಗಾಜಿಗೌಡ್ರ, ಆನಂದ ದೊಡ್ಡಕುರಬರ, ಪರಶುರಾಮ ಲಮಾಣಿ, ಮಹೇಶ ಹೊರಕೇರಿ, ಮಾಲತೇಶ ಹಟ್ಟಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net