

ತಿಕೋಟಾ: ನಿರಗುಡಿ ಹವಾ ಮಲ್ಲಿನಾಥ ಮಹಾರಾಜರ ಮೇಲೆ ಅಪಾರವಾದ ಭಕ್ತಿ ಹೊಂದಿದ ಜನತೆ ಪುಣೆ ಬಳಿಯ ಬಿಗುವಾನ್ ಪ್ರದೇಶದಲ್ಲಿ ಮುಖ್ಯ ಮಠ ಸೇರಿದಂತೆ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತೆಲಂಗಾಣ, ಉತ್ತರ ಪ್ರದೇಶ, ದೆಹಲಿ ಸೇರಿದಂತೆ ವಿವಿಧೆಡೆ ಮಠ, ಕುಟೀರ, ಆಶ್ರಮಗಳನ್ನು ನಿರ್ಮಿಸಿದ್ದಾರೆ ಎಂದು ಪಿಕೆಪಿಎಸ್ ನಿವೃತ ಅಧಿಕಾರಿ ಸದಾಶಿವ ಮಂಗಸೂಳಿ ಹೇಳಿದರು.
ಪಟ್ಟಣದಲ್ಲಿ ಹವಾ ಮಲ್ಲಿನಾಥ ದೇವಸ್ಥಾನದ ಗೋಪುರ ಕಟ್ಟಡ ನಿರ್ಮಾಣದ ಪೂಜಾ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು.
ನಿರಗುಡಿ ಹವಾ ಮಲ್ಲಿನಾಥ ಮಹಾರಾಜರು ಕನ್ನಡ, ಮರಾಠಿ, ತೆಲುಗು, ಹಿಂದಿ ಸೇರಿದಂತೆ ಐದಾರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಸಂತ ಎಂದರು.
ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ ಕಣಬೂರ ಪೂಜೆ ನೆರವೇರಿಸಿದರು. ಚಂದ್ರಶೇಖರಯ್ಯ ಹಿರೇಮಠ, ರಾಜು ಚೌಧರಿ, ಬಾಬು ಪರೀಟ, ಮಲ್ಲಿಕಾರ್ಜುನ ಭೂಸಗೂಂಡ, ಮಹೇಶ ಗಣಿ, ಶಿವು ಪರೀಟ, ಸುರೇಶ ಕಡಿಬಾಗಿಲ, ಮುರುಗೇಶ ಕಣಬೂರ, ಸಿದ್ದು ಕೊಟ್ಟಲಗಿ, ಗುರುಲಿಂಗಯ್ಯ ಮಠಪತಿ, ಅನೀಲ ಪೂಜೇರಿ, ಮಲ್ಲು ಪೂಜೇರಿ,ಪ್ರವೀಣ ಹಿಣಸಿಕಟ್ಟಿ, ಧರೆಪ್ಪ ರಬಿನಾಳ, ಉಮೇಶ ರಬಿನಾಳ, ಚಿದಾನಂದ ಮಠಪತಿ, ಲೇಪು ಕೊಣ್ಣೂರ ಇತರರಿದ್ದರು.