

ಪುತ್ತೂರು: ಬೆಂಗಳೂರು ಅರಮನೆ ಮೈದಾನದಲ್ಲಿ ಡಿ.೨೭ರಿಂದ ೨೯ರ ತನಕ ನಡೆಯುವ ಮೂರನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಕೃಷಿರತ್ನ ಪ್ರಶಸ್ತಿಗೆ ವಿಶ್ರಾಂತ ಪ್ರಾಧ್ಯಾಪಕ ಡಾ.ವಿಘ್ನೇಶ್ವರ ವರ್ಮುಡಿ ಆಯ್ಕೆಯಾಗಿದ್ದಾರೆ. ಡಿ.೨೭ರಂದು ಪ್ರಶಸ್ತಿ ಪ್ರದಾನಿಸಲಾಗುವುದು.
೧೯೮೬ರಿಂದ ವರ್ಮುಡಿ ಅವರು ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬಗ್ಗೆ ಬರೆದ ಸಾವಿರಕ್ಕೂ ಮಿಕ್ಕಿದ ಸಂಶೋಧನಾ ಲೇಖನಗಳು, ಆಂಗ್ಲ ಹಾಗೂ ಕನ್ನಡ ಭಾಷೆಗಳಲ್ಲಿ ಬರೆದ ೫೦ಕ್ಕೂ ಅಽಕ ಪುಸ್ತಕಗಳು, ಅಡಕೆ ಮಾರುಕಟ್ಟೆ ಬಗ್ಗೆ ನಡೆಸಿದ ಸಂಶೋಧನೆಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ೧೫ ಪರಾಮರ್ಶನ ಗ್ರಂಥಗಳು ಭಾರತ ಸೇರಿ ಅಮೆರಿಕ, ಇಂಗ್ಲೆಂಡ್, ವೆಸ್ಟ್‌ಇಂಡೀಸ್, ಶ್ರೀಲಂಕಾ, ಹಾಲೆಂಡ್ ರಾಷ್ಟ್ರಗಳ ವಿಶ್ವವಿದ್ಯಾಲಯಗಳ ಪರಾಮರ್ಶನ ಗ್ರಂಥಗಳಾಗಿವೆ. ೫ಕ್ಕೂ ಅಽಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದಾರೆ. ಅಡಕೆ ವಿಚಾರದಲ್ಲಿ ನಾಲ್ಕು ಸಂಶೊಧನಾತ್ಮಕ ವರದಿ ಪ್ರಕಟಿಸಿದ್ದು, ಎರಡು ಅನುಷ್ಠಾನಗೊಂಡರೆ, ಇನ್ನೆರಡಕ್ಕೆ ಪರಿಹಾರ ಲಭಿಸಿದೆ.