ಸಾಮೂಹಿಕ ಯಜ್ಞೋಪವೀತ 19ರಂದು

Published on

ಹುಬ್ಬಳ್ಳಿ: ಇಲ್ಲಿಯ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ನೂಲ ಹುಣ್ಣಿಮೆ ನಿಮಿತ್ತ ಆ. 19ರಂದು ಬೆಳಗ್ಗೆ 7.30ರಿಂದ ನಗರದ ಹವ್ಯಕ ಭವನದಲ್ಲಿ ಉಚಿತ ಸಾಮೂಹಿಕ ಯಜ್ಞೋಪವೀತ ಧಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹೊಸತಾಗಿ ಉಪನಯನಯಾದ ವಟುಗಳಿಗೆ ಉಪಾಕರ್ಮ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಂಸ್ಥೆಯ ಆಶ್ರಯದಲ್ಲಿ ಧಾರವಾಡದ ಹವ್ಯಕ ಬಂಧುಗಳಿಗೂ ಕೆಇಬಿ ಗಣಪತಿ ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ಯಜ್ಞೋಪವೀತ ಧಾರಣೆ ಹಾಗೂ ಉಪಾಕರ್ಮ ಕಾರ್ಯಕ್ರಮ ಆಯೋಜಿಸಲಾಗಿದೆ.

ಆಸಕ್ತರು ಸಂಸ್ಥೆಯ ಪದಾಧಿಕಾರಿಗಳನ್ನು ಸಂಪಕಿರ್ಸಿ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಅಧ್ಯಕ್ಷ ವಿ.ಎಂ. ಭಟ್ ಮತ್ತು ಗೌರವ ಕಾರ್ಯದರ್ಶಿ ಸುದರ್ಶನ್ ಜಿ.ಎಚ್. ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net