ಗೋ ರಕ್ಷಕರ ಮೇಲೆ ಹಲ್ಲೆ ಮಾಡಿದ ಆರೋಪಿಗಳು ಅಂದರ್

Crime
Crime
Published on

ರಾಣೆಬೆನ್ನೂರು: ಗೋ ರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಗೌಸಿಯಾ ಪ್ಲಾಟ್ ನಿವಾಸಿ ಮುಬಾರಕಖಾನ್ ಆಯುಬಖಾನ್ ಕಟ್ಟಿಮನಿ (27) ಹಾಗೂ ಅಲ್ತಾ್ ನಗರದ ಆರೀ್ ನನ್ಯಸಾಬ ಮುಲ್ಲಾ (21) ಬಂಧಿತ ಆರೋಪಿತರು.

ಇವರು ಗೋ ರಕ್ಷಕ ಹಾಗೂ ಭಜರಂಗದಳದ ಕಾರ್ಯಕರ್ತ ರುದ್ರೇಶ ದಿನೇಶ ಬುಕ್ಕಶೆಟ್ಟಿ (28) ಎಂಬುವನ ಮೇಲೆ ಕಸಾಯಿಖಾನೆ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಾನೆಂದು ಆರೋಪಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬಂಧಿಸದಿದ್ದರೆ ರಾಣೆಬೆನ್ನೂರು ಬಂದ್ ಮಾಡಲಾಗುವುದು ಎಂದು ಹಿಂದೂ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net