ಪ್ರೀತಿಸು ಎಂದು ಗಂಟುಬಿದ್ದ ಯುವಕ; ಸಿಂಗಾಪುರದ ಮಹಿಳೆ ಆತ್ಮಹತ್ಯೆ

Crime
Crime
Published on

ಹಾನಗಲ್ಲ: ತನ್ನನ್ನು ಪ್ರೀತಿಸಬೇಕು. ಇಲ್ಲವಾದರೆ ನಿನ್ನನ್ನು ಬಿಡುವುದಿಲ್ಲವೆಂದು ಮಹಿಳೆಯೊಬ್ಬಳಿಗೆ ಮಾನಸಿಕವಾಗಿ ಹಿಂಸೆ ನೀಡಿ ಆಕೆಯ ಮೊಬೈಲ್ಅನ್ನು ಕಸಿದುಕೊಂಡು ಹೋದ ಯುವಕನ ಕಿರುಕುಳ ತಾಳಲಾರದೆ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟನೆ ತಾಲೂಕಿನ ಸಿಂಗಾಪುರ ಪ್ಲಾಟ್ನಲ್ಲಿ ನಡೆದಿದೆ.

ಸುಮಾ ಶಿವಾನಂದ ಕಾಲ್ವೆಯಲ್ಲಾಪುರ (29) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ತಾಲೂಕಿನ ಮಲಗುಂದ ಗ್ರಾಮದ ವಿನಾಯಕ ಮಲ್ಲಪ್ಪ ಇಡಗೋಡ ಕಿರುಕುಳ ನೀಡಿದ ಆರೋಪಿ.

ಈತ ಸುಮಾಳಿಗೆ "ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನೀನು ನಾನು ಹೇಳಿದಂತೆ ಕೇಳಬೇಕು. ನಾನು ಹೇಳಿದ್ದಕ್ಕೆ ಸಹಕಾರ ನೀಡಬೇಕು' ಎಂದು ಪೀಡಿಸುತ್ತಿದ್ದ. ಈ ಕುರಿತು ಹಿರಿಯರ ಸಮ್ಮುಖದಲ್ಲಿ ವಿನಾಯಕನಿಗೆ ಬುದ್ಧಿವಾದ ಕೂಡ ಹೇಳಲಾಗಿತ್ತು. ಆದರೂ ಆತ ಹಳೇ ಚಾಳಿಯನ್ನೇ ಮುಂದುವರಿಸಿದ್ದ. ಅಲ್ಲದೆ ಸುಮಾಳ ಮೊಬೈಲ್ಅನ್ನು ಕಸಿದುಕೊಂಡು ಹೋಗಿದ್ದ. ಇದರಿಂದ ಮನನೊಂದು ಸುಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಸಂಬಂಧಿಕರು ದೂರಿನಲ್ಲಿ ಆರೋಪಿಸಿದ್ದಾರೆ.

ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net