

ರಾಣೆಬೆನ್ನೂರ: ಇನ್ಸ್ಟಾ ಗ್ರಾಮ್ನಲ್ಲಿ "ಝಡ್ ಮ್ಯಾನ್ ಕನ್ನಡ' ಎಂದು ಪ್ರಖ್ಯಾತಿ ಪಡೆದಿದ್ದ ಯುವಕನೊಬ್ಬ ಎನ್ಎಚ್&48ರ ಅಧಿಕಾರಿಗಳು ಮಾಡಿದ್ದ ಎಡವಟ್ಟಿನಿಂದಾಗಿ ಸರ್ವೀಸ್ ರಸ್ತೆಯ ೈಪ್ಲೈನ್ ಗುಂಡಿಯಲ್ಲಿ ಬೈಕ್ ಸಮೇತ ಬಿದ್ದು ದುರಂತ ಅಂತ್ಯ ಕಂಡ ಟನೆ ಶನಿವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿಯ ಸಿದ್ದೇಶ್ವರ ನಗರದ ನಿವಾಸಿ ಶರತ್ ಷಣ್ಮುಖಪ್ಪ ಶಿಗ್ಲಿ (25) ಮೃತ ಯುವಕ.
ಈತ ಶನಿವಾರ ರಾತ್ರಿ ತನ್ನ ಕೆಟಿಎಂ ಬೈಕ್ ಮೇಲೆ ಎನ್ಎಚ್&48ರ ಸರ್ವೀಸ್ ರಸ್ತೆಯಲ್ಲಿ ಯರೇಕುಪ್ಪಿ ಸೇತುವೆಯಿಂದ ಹಾವೇರಿ ಕಡೆಯ ಸೇತುವೆ ಕಡೆಗೆ ತೆರಳುತ್ತಿದ್ದ. ಈ ಸಮಯದಲ್ಲಿ ಸರ್ವೀಸ್ ರಸ್ತೆ ಬಳಿ ನೀರಿನ ಪೈಪ್ಲೈನ್ನ ವಾಲ್ ಚೆಂಬರ್ ಗುಂಡಿಯಲ್ಲಿ ಬೈಕ್ ಸಮೇತ ಬಿದ್ದಿದ್ದಾನೆ. ಗುಂಡಿಯಲ್ಲಿದ್ದ ನೀರು ಹೆಚ್ಚಿನ ಪ್ರಮಾಣದಲ್ಲಿ ನಿಂತಿದ್ದರಿಂದ ಆತ ಏಳಲಾಗದೆ ಮುಳಗಿ ಮೃತಪಟ್ಟಿದ್ದಾನೆ.
ಈ ಕುರಿತು ಮರುದಿನ ದಾರಿಹೋಕರು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಟನಾ ಸ್ಥಳಕ್ಕೆ ಡಿವೈಎಸ್ಪಿ ಲೋಕೇಶ ಜೆ., ಗ್ರಾಮೀಣ ಠಾಣೆ ಸಿಪಿಐ ನಾಗಯ್ಯ ಕಾಡದೇವರಮಠ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಧಿಕಾರಿಗಳ ವಿರುದ್ಧ ದೂರು...
ಪ್ರಕರಣಕ್ಕೆ ಸಂಬಂಧಿಸಿ ಮೃತನ ತಂದೆ ಷಣ್ಮುಖಪ್ಪ ಪೊಲೀಸರಿಗೆ ದೂರು ನೀಡಿದ್ದು, "ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸರ್ವೀಸ್ ರಸ್ತೆ ಬಳಿ ನೀರಿನ ಪೈಪ್ಲೈನ್ನ ವಾಲ್ ಚೆಂಬರ್ ಗುಂಡಿಯನ್ನು ಮುಚ್ಚದೆ ಹಾಗೆ ಬಿಟ್ಟಿದ್ದಾರೆ. ಅಲ್ಲದೆ ಚೆಂಬರ್ ಇರುವ ಕುರಿತು ಯಾವುದೆ ನಾಮಲಕ ಕೂಡ ಹಾಕಿಲ್ಲ. ಇದರಿಂದ ಶರತ್ ಗುಂಡಿ ಕಾಣದೆ ಹೋಗಿ ಬಿದ್ದಿದ್ದಾನೆ. ಆದ್ದರಿಂದ ಅವನ ಸಾವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ಹೊಣೆಯಾಗಿದ್ದಾರೆ' ದೂರಿನಲ್ಲಿ ಆರೋಪಿಸಿದ್ದಾರೆ.
ಝಡ್ ಮ್ಯಾನ್ ಎಂದೇ ಪ್ರಖ್ಯಾತಿ...
ಶರತ್ ಶಿಗ್ಲಿ ಝಡ್ ಮ್ಯಾನ್ ಕನ್ನಡ ಎಂಬ ಹೆಸರಿನಲ್ಲಿ ಇನ್ಸ್ಟಾ ಗ್ರಾಮ್ನಲ್ಲಿ ೇಜ್ ತೆರೆದಿದ್ದ. ಅದರ ಮೂಲಕ ಹಿಂದುತ್ವ, ಸಂಪ್ರದಾಯ, ಆಚರಣೆ ಹಾಗೂ ದೇವರಗಳ ಪರವಾಗಿ ರೀಲ್ಸ್ ಮಾಡಿ ಅಪಲೋಡ್ ಮಾಡುತ್ತಿದ್ದ. ಆತನ ಪೇಜ್ಗೆ ಸಾವಿರಾರು ಜನ ಾಲೋವರ್ಸ್ ಕೂಡ ಇದ್ದಾರೆ. ಅಲ್ಲದೆ ಜೀಮ್ ಮಾಡುವ ಮೂಲಕ ಸದೃಢ ಮೈಕಟ್ಟು ಹೊಂದಿದ್ದ. ಹೀಗಾಗಿ ಆತ ಝಡ್ ಮ್ಯಾನ್ ಎಂದೆ ಹೆಸರು ಗಳಿಸಿದ್ದ. ಇದೀಗ ಆತನ ಸಾವು ಭರಸಿಡಿಲು ಬಡಿದಂತಾಗಿದೆ.