Immense ಜಗತ್ತಿಗೆ ಯಾಜ್ಞವಲ್ಕರ ಕೊಡುಗೆ ಅಪಾರ

ಹಾನಗಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಸುಮಂಗಲೆಯರಿಂದ ಯಾಜ್ಞವಲ್ಕರ ತೊಟ್ಟಿಲೋತ್ಸವ ಜರುಗಿತು. ಮಧುಲಿಕಾ ದೇಸಾಯಿ, ವಿದ್ಯಾ ದೇಸಾಯಿ, ಸುರೇಖಾ ಕುಲಕಣಿರ್, ಶ್ರೀದೇವಿ ಪುರೋಹಿತ, ಭಾರತಿ ಪಾಟೀಲ, ರಾಧಿಕಾ ದೇಸಾಯಿ, ಸರಸ್ವತಿ ಜೋಶಿ, ಭಾರ್ಗವಿ ಪುರೋಹಿತ, ಗೌರಿ ದೇಶಪಾಂಡೆ ಹಾಗೂ ಮೈತ್ರೇಯಿ ಭಜನಾ ಮಂಡಳ ಸದಸ್ಯೆಯರು ಉಪಸ್ಥಿತರಿದ್ದರು.
ಹಾನಗಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಸುಮಂಗಲೆಯರಿಂದ ಯಾಜ್ಞವಲ್ಕರ ತೊಟ್ಟಿಲೋತ್ಸವ ಜರುಗಿತು. ಮಧುಲಿಕಾ ದೇಸಾಯಿ, ವಿದ್ಯಾ ದೇಸಾಯಿ, ಸುರೇಖಾ ಕುಲಕಣಿರ್, ಶ್ರೀದೇವಿ ಪುರೋಹಿತ, ಭಾರತಿ ಪಾಟೀಲ, ರಾಧಿಕಾ ದೇಸಾಯಿ, ಸರಸ್ವತಿ ಜೋಶಿ, ಭಾರ್ಗವಿ ಪುರೋಹಿತ, ಗೌರಿ ದೇಶಪಾಂಡೆ ಹಾಗೂ ಮೈತ್ರೇಯಿ ಭಜನಾ ಮಂಡಳ ಸದಸ್ಯೆಯರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಗಡಿ ಆನಂದವನದ ವಿಶ್ವನಾಥ ಚಕ್ರವತಿರ್ಗಳ ನುಡಿ
ಹಾನಗಲ್ಲ: ಯೋಗೀಶ್ವರ ಯಾಜ್ಞವಲ್ಕರು ಜಗತ್ತಿಗೆ ಅಪಾರವಾದ ಧಾಮಿರ್ಕ ಕೊಡುಗೆ ನೀಡಿದ್ದಾರೆ. ಯಾಜ್ಞವಲ್ಕ ಸ್ಮತಿ ಹಲವು ದೇಶಗಳ ಭಾಷೆಗಳಿಗೆ ತರ್ಜುಮೆಯಾಗಿ ಪ್ರಕಟವಾಗಿವೆ ಎಂದು ಅಗಡಿ ಆನಂದವನದ ವಿಶ್ವನಾಥ ಚಕ್ರವತಿರ್ಗಳು ಹೇಳಿದರು.
ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ಯಾಜ್ಞವಲ್ಕ ಸೇವಾ ಸಮಿತಿ ಬುಧವಾರ ಆಯೋಜಿಸಿದ್ದ ಜಯಂತ್ಯುತ್ಸವದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಶುಕ್ಲ ಯಜುರ್ವೇದದ ಪ್ರವರ್ತಕರಾಗಿದ್ದ ಯಾಜ್ಞವಲ್ಕರು ಈಶೋಪನಿಷತ್ತು ರಚಿಸುವ ಮೂಲಕ ನೈತಿಕ ಮೌಲ್ಯಗಳನ್ನು ಸಾರಿದ್ದಾರೆ. ಗೋ ಪೂಜೆ ಹಾಗೂ ಸೇವೆಯನ್ನು ಕೈಗೊಳ್ಳುವಂತೆ 5 ಸಾವಿರ ವರ್ಷಗಳ ಹಿಂದೆಯೇ ಯಾಜ್ಞವಲ್ಕರುತಿಳಿಸಿದ್ದರು. ನಮ್ಮ ಸಂವಿಧಾನದಲ್ಲಿರುವ ಬಹಳಷ್ಟು ಕಾನೂನಾತ್ಮಕ ಅಂಶಗಳು ಯಾಜ್ಞವಲ್ಕ ಸ್ಮತಿಯನ್ನಾಧರಿಸಿ ರಚಿಸಲಾಗಿದೆ. ಈ ಹಿನ್ನೆಲೆಯಲ್ಲಿಯೇ ಸಂಸತ್ತಿನಲ್ಲಿ ಯಾಜ್ಞವಲ್ಕರ ಭಾವಚಿತ್ರ ಹಾಕಲಾಗಿದೆ ಎಂದು ವಿವರಿಸಿದರು.
ಸೂರ್ಯದೇವನ ಆರಾಧನೆ ಮೂಲಕ ಯಜುರ್ವೇದವನ್ನು ಪಡೆದ ಯಾಜ್ಞವಲ್ಕರು, ಶುಕ್ಲ ಯಜುರ್ವೇದವನ್ನಾಗಿ ಜಗತ್ತಿಗೆ ಕೊಡುಗೆಯಾಗಿ ನೀಡಿದರು. ಗೃಹಸ್ಥಾಶ್ರಮ ಎಲ್ಲ ಆಶ್ರಮಗಳಿಗಿಂತ ಅತ್ಯಂತ ಶ್ರೇಷ್ಠವಾಗಿದ್ದು, ನಮ್ಮ ಧರ್ಮ ಶ್ರದ್ಧೆ ಹಾಗೂ ಬ್ರಾಹ್ಮಣ್ಯದ ಉಳಿವಿಗೆ ಆದರ್ಶವಾಗಿ ಬಳಸಿಕೊಳ್ಳಬೇಕು. ನಿತ್ಯ ಬ್ರಹ್ಮ ಚಿಂತನೆಯಲ್ಲಿರುವವರೇ ಬ್ರಾಹ್ಮಣರು. ಈ ಕಲಿಯುಗದಲ್ಲಿ ಧರ್ಮ ಉಳಿಸುವುದು ಸ್ತ್ರೀಯರಿಂದ ಮಾತ್ರ ಸಾಧ್ಯವಿದೆ. ಯುವ ಸಮುದಾಯ ದಾರಿ ತಪ್ಪಬಾರದು. ಎಲ್ಲೆಡೆಗೂ ಬ್ರಾಹ್ಮಣ ಸಮುದಾಯವನ್ನು ಗೌರವದಿಂದ ಕಾಣುವಂತಾಗಬೇಕು. ಇದಕ್ಕೆ ಬ್ರಾಹ್ಮಣರು ಧರ್ಮ ಜಾಗೃತಿ ಕೈಗೊಳ್ಳಬೇಕಿದೆ. ಶುಕ್ಲ ಯಜುರ್ವೇದ ಗ್ರಂಥ ಪ್ರತಿ ಮನೆಯಲ್ಲೂ ಅಧ್ಯಯನ ಮಾಡುವಂಥದ್ದು. ಮಹಾತ್ಮರ ಚರಿತ್ರೆಗಳನ್ನು ಅಧ್ಯಯನ ಮಾಡುವುದರಿಂದ ಸಂಸ್ಕಾರ ಬರುತ್ತದೆ ಎಂದರು.
ಇದಕ್ಕೂ ಮೊದಲು ವೆಂಕಟೇಶ್ವರ ದೇವಸ್ಥಾನದಲ್ಲಿ ಸುಮಂಗಲೆಯರಿಂದ ಯಾಜ್ಞವಲ್ಕರ ತೊಟ್ಟಿಲೋತ್ಸವ ಜರುಗಿತು. ಬೆಳಗ್ಗೆ ಯಾಜ್ಞವಲ್ಕರ ಅಷ್ಟೋತ್ತರ ಪಠಣ, ರುದ್ರಾಭಿಷೇಕ, ಸಾಮೂಹಿಕ ಗಂಗಾ ಪೂಜೆ, ದಶಹರ ದಾನ ಜರುಗಿದವು. ನಂತರ ಶ್ರೀದೇವಿ ಪುರೋಹಿತ ಅವರಿಂದ ಗಮಕ ವಾಚನ ಹಾಗೂ ಸುರೇಖಾ ಕುಲಕಣಿರ್ ಅವರಿಂದ ವಿವರಣೆ ನಡೆಯಿತು.
ಯಾಜ್ಞವಲ್ಕ ಸೇವಾ ಸಮಿತಿ ಪದಾಧಿಕಾರಿಗಳಾದ ಆರ್​.ಸಿ. ದೇಸಾಯಿ, ಡಿ.ಜಿ. ಕುಲಕಣಿರ್, ಎಸ್​.ಜಿ. ಕುಲಕಣಿರ್, ಶರಶ್ಚಂದ್ರ ದೇಸಾಯಿ, ದತ್ತಾತ್ರೆಯ ದೇಸಾಯಿ, ಕೃಷ್ಣಾ ಪೂಜಾರ, ನಾಗರಾಜ ಪೂಜಾರ, ಪ್ರಮೋದ ಕುಲಕಣಿರ್, ಉದಯ ನಾಸಿಕ, ರವಿ ಪೋತದಾರ, ವೇ.ಮೂ. ಶಂಕರಭಟ್​ ಜೋಶಿ, ಹನುಮಂತಭಟ್​ ಕುಲಕಣಿರ್, ಪ್ರದಿಪ ಬಾಳಿಹಳ್ಳಿ, ಆನಂದ ಪೂಜಾರ, ಲಕ್ಷ$್ಮಣ ಪೂಜಾರ, ಮಧುಲಿಕಾ ದೇಸಾಯಿ, ವಿದ್ಯಾ ದೇಸಾಯಿ, ಭಾರತಿ ಪಾಟೀಲ, ರಾಧಿಕಾ ದೇಸಾಯಿ, ಮೆತ್ರೇಯಿ ಭಜನಾ ಮಂಡಳ ಸದಸ್ಯೆಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net