

ಹಕ್ಕುಪತ್ರ ನೀಡುವ ಮುನ್ನ ಚರ್ಚೆ ಮಾಡಬೇಕಿದ್ದು, ಅರ್ಹರನ್ನು ಆಯ್ಕೆ ಮಾಡುವ ಸಲುವಾಗಿ ಸದಸ್ಯರು ಸಾಕಷ್ಟು ಸೂಚನೆ ನೀಡಿದ್ದಾರೆ. ಸದಸ್ಯರಿಗೂ ತಮ್ಮ ವಾರ್ಡ್ನಲ್ಲಿ ಆಯ್ಕೆಯಾದ ಫಲಾನುಭವಿಗಳ ಹೆಸರು ತಿಳಿದಿಲ್ಲ. ಅಲ್ಲದೆ, ಸದಸ್ಯರು ಸೂಚಿಸಿದ ಅರ್ಹರಿಗೂ ನಿವೇಶನ ಸಿಕ್ಕಿಲ್ಲವೆನ್ನುವ ಆರೋಪವಿದೆ. ಕೂಡಲೇ ಆಶ್ರಯ ಸಮಿತಿ ಸದಸ್ಯರು, ಶಾಸಕರು ಪುನಃ ಸಭೆ ಕರೆದು ನ್ಯಾಯ ಒದಗಿಸಬೇಕು.
| ಬಸವರಾಜ ಛತ್ರದ, ಪುರಸಭೆ ಸದಸ್ಯ.
ಆಶ್ರಯ ಸಮಿತಿ ಸದಸ್ಯರು ಪುರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ಣಯಿಸಿದ್ದಾರೆ. ನನ್ನ ವಾರ್ಡ್ ಸೇರಿದಂತೆ ಬಹುತೇಕ ಸದಸ್ಯರ ವಾರ್ಡ್ನಲ್ಲಿ ಅರ್ಹರನ್ನು ಕೈಬಿಟ್ಟು ಅನರ್ಹರ ಆಯ್ಕೆ ನಡೆದಿದೆ. ಇದಕ್ಕೆ ದಾಖಲೆ ನೀಡಲು ಸಿದ್ಧ. ನ್ಯಾಯ ಸಿಗದಿದ್ದಲ್ಲಿ ಎರಡು ದಿನಗಳ ಬಳಿಕ ನಿವಾಸಿಗಳ ಜತೆ ಹೋರಾಟ ನಡೆಸುವೆ. ಶಾಸಕರು, ಅಧಿಕಾರಿಗಳು ಕೂಡಲೇ ಅನರ್ಹರ ಹೆಸರು ಕೈಬಿಡಬೇಕು. ಸದಸ್ಯರ ವಿಶ್ವಾಸ ಪಡೆದು ನ್ಯಾಯ ಒದಗಿಸಬೇಕು.
| ಸುಭಾಸ ಮಾಳಗಿ, ಪುರಸಭೆ ಉಪಾಧ್ಯಕ್ಷ.
ನಾವು ಹಲವು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಆಶ್ರಯ ಸಮಿತಿ ಸದಸ್ಯರು ಪರಿಶೀಲನೆ ನಡೆಸಿದ್ದಾರೆ. ಪುರಸಭೆ ಸದಸ್ಯರ ಗಮನಕ್ಕೂ ತಂದು ಫಲಾನುಭವಿ ಪಟ್ಟಿ ಸಿದ್ಧಪಡಿಸಲಾಗಿದೆ. ಆದಾಗ್ಯೂ ಪಟ್ಟಿಯಲ್ಲಿ ಕೆಲ ಅನರ್ಹರಿದ್ದಾರೆ ಎನ್ನುವ ಕುರಿತು ಆರೋಪ ಕೇಳಿಬಂದಿದೆ. ಅನರ್ಹರ ಕುರಿತು ದಾಖಲೆಗಳಿದ್ದಲ್ಲಿ ಪರಿಶೀಲಿಸುತ್ತೇನೆ. ಸದಸ್ಯರ ಸಹಕಾರ ಪಡೆದು ಮತ್ತೊಮ್ಮೆ ಸಭೆ ನಡೆಸಿ, ಅನರ್ಹರನ್ನು ಪಟ್ಟಿ ಕೈಬಿಡಲಾಗುವುದು.
| ವಿನಯಕುಮಾರ ಹೊಳೆಪ್ಪಗೋಳ, ಪುರಸಭೆ ಮುಖ್ಯಾಧಿಕಾರಿ.