ಗಮನ ಸೆಳೆದ ಕೇಸರಿ ಸಮವಸ್ತ್ರ ತೊಟ್ಟ ಮಹಿಳೆಯರ ಪಥಸಂಚಲನ

Women, prevention
Women, prevention
Published on

ರಾಣೆಬೆನ್ನೂರ: ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇನ್ನರ್ ವ್ಹೀಲ್ ಕ್ಲಬ್ ಹಾಗೂ ವಿವಿಧ ಮಹಿಳಾ ಸಂಘಟನೆಗಳ ವತಿಯಿಂದ ಬುಧವಾರ ನಗರದಲ್ಲಿ ಬೃಹತ್ ಮಹಿಳಾ ಪಥ ಸಂಚಲನ ನಡೆಸಲಾಯಿತು.

ನಗರದ ಮುನ್ಸಿಪಲ್ ಮೈದಾನದಿಂದ ಆರಂಭಗೊಂಡ ಜಾಥಾ ಕುರುಬಗೇರಿ ಕ್ರಾಸ್, ದುರ್ಗಾ ವೃತ್ತ, ಎಂ.ಜಿ. ರಸ್ತೆ, ಪೋಸ್ಟ್ ವೃತ್ತದ ಮೂಲಕ ಅಶೋಕ ವೃತ್ತಕ್ಕೆ ಬಂದು ತಲುಪಿತು.

ಮಹಿಳೆಯರ ರಕ್ಷಣೆ ಪ್ರಮುಖವಾಗಬೇಕು. ಸಮಾಜದಲ್ಲಿ ನಡೆಯುವ ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಿಸಬೇಕು. ಮಹಿಳೆಯನ್ನು ಸಶಕ್ತಿಕರಣಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ರೂಪಾ ಕಾಕಿ, ಶಿಲ್ಪಾ ಸಾವಕಾರ, ಡಾ. ದೀಪಾಲಿ ಪುನೀತ್, ಭಾರತಿ ಜಂಬಗಿ, ಡಾ. ರತ್ನಪ್ರಭಾ ಕೆಂಚಪ್ಪನವರ, ಮಂಗಳಗೌರಿ ಪೂಜಾರ, ಚಂಪಕ್ಕ ಬಿಸಲಹಳ್ಳಿ, ಪೂರ್ಣಿಮಾ ಕುರುವತ್ತಿ, ಸುಮಾ ಹೊಟ್ಡಿಗೌಡ್ರ, ಡಾ. ವಿದ್ಯಾ ವಾಸುದೇವಮೂರ್ತಿ, ಪ್ರೀಯಾ ಸಾವಕಾರ, ಶೈಲಾ ಬಣಕಾರ, ಗೀತಾ ಕಾಕೋಳ, ವಸಂತಾ ಹುಲ್ಲತ್ತಿ, ಸುಮನ್ ಪಾಟೀಲ, ಲಲಿತಾ ಸುರೇಶ, ಸುಮಾ ಉಪ್ಪೀನ ಹಾಗೂ ಶಾಲಾ-ಕಾಲೇಜ್ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net