ಫೋನ್ ಬ್ಯೂಸಿ ಬರುತ್ತೆ ಅಂತಾ ಮಹಿಳೆಯ ಹತ್ಯೆ ಮಾಡಿದ ಆತ್ಮೀಯ

Crime
Crime
Published on

ರಾಣೆಬೆನ್ನೂರ: ಫೋನ್ ಬ್ಯೂಸಿ ಬರುತ್ತೆ ಅಂತಾ ಮಹಿಳೆಯೊಬ್ಬಳನ್ನು ಕತ್ತು ಕೊಯ್ದು ಕೊಲೆ ಮಾಡಿದ್ದ ಆರೋಪಿಯನ್ನು 24 ಗಂಟೆಯೊಳಗೆ ಇಲ್ಲಿಯ ಶಹರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದ ಚಂದ್ರಪ್ಪ ಶಿವಲಿಂಗಪ್ಪ ಸಣ್ಣಮಲ್ಲಪ್ಪನವರ (36) ಬಂಧಿತ ಆರೋಪಿ.

ಈತ ಭಾನುವಾರ ರಾತ್ರಿ ನಗರದ ಕೂನಬೇವು ರಸ್ತೆಯಲ್ಲಿರುವ ಒಂಟಿ ಮನೆಯಲ್ಲಿ ವಾಸವಾಗಿದ್ದ ಲಲಿತಾ ಕರಬಸಪ್ಪ ಬ್ಯಾಡಗಿ (42) ಎಂಬುವಳನ್ನು ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಶಹರ ಠಾಣೆ ಪೊಲೀಸರು ಎಸ್ಪಿ ಯಶೋಧಾ ವಂಟಗೋಡಿ ಹಾಗೂ ಡಿವೈಎಸ್ಪಿ ಲೋಕೇಶ ಜೆ. ಮಾರ್ಗದರ್ಶನದಲ್ಲಿ ಪಿಎಸ್ಐ ಗಡ್ಡೆಪ್ಪ ಗುಂಜುಟಗಿ ಹಾಗೂ ಎಚ್.ಸಿ.‌ ದೊಡ್ಡಮನಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಸಿಬ್ಬಂದಿಯಾದ ಪಿ.ಕೆ. ಲಮಾಣಿ, ಎಲ್.ಬಿ. ಕರಿಗಾರ, ಎಚ್.ಟಿ. ನಗಾವತ್, ಮಂಜು ರೊಟ್ಟಿಯವರ, ಮೋಹನ್ ಮೇಲಗಿರಿ, ಮಂಜುನಾಥ್ ಎಚ್.ವೈ. ಎಂ.ಆರ್ ಬುಳ್ಳಾಪುರ, ಎಸ್.ಎಲ್. ರಾಠೋಡ ಕಾರ್ಯಾಚರಣೆಯಲ್ಲಿದ್ದರು.‌

ಫೋನ್ ಬ್ಯೂಸಿ ಬರುತ್ತೆ ಅಂತಾ ಕೊಲೆ...

ಲಲಿತಾಳ ಹತ್ತು ವರ್ಷದ ಹಿಂದೆ ಮೃತಪಟ್ಟಿದ್ದ. ನಂತರದ ದಿನದಲ್ಲಿ ಲಲಿತಾ ಚಂದ್ರಪ್ಪನೊಂದಿಗೆ ಆತ್ಮೀಯತೆಯಿಂದ ಇದ್ದಳು. ಆದರೆ ಚಂದ್ರಪ್ಪ ಫೋನ್ ಮಾಡಿದ ಸಮಯದಲ್ಲಿ ಲಲಿತಾಳ ಫೋನ್ ಬ್ಯೂಸಿ ಬರುತ್ತಿತ್ತು. ಇದರಿಂದ ಕಳೆದ ಆರು ತಿಂಗಳಿಂದ ಇಬ್ಬರ ನಡುವೆ ಜಗಳ ಕೂಡ ಆಗುತ್ತಿತ್ತು. ಇದೇ ಕಾರಣಕ್ಕೆ ಭಾನುವಾರ ರಾತ್ರಿ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಚಂದ್ರಪ್ಪ ಲಲಿತಾಳ ಕುತ್ತಿಗೆಯನ್ನು ಚಾಕೂವಿನಿಂದ ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net