

ಹಾವೇರಿ: ಬಸ್ ಹತ್ತುವ ಸಮಯದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ 3.15 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರವನ್ನು ಯಾರೋ ದೋಚಿದ ಘಟನೆ ನಗರದ ಎನ್ಡಬ್ಲೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ತಾಲೂಕಿನ ಕೋಣನತಂಬಗಿ ಗ್ರಾಮದ ನಿರ್ಮಲಾ ಯಲ್ಲಪ್ಪ ಕಳ್ಳಿಮನಿ (41) ಎಂಬುವರ ಚಿನ್ನದ ಸರ ಕಳ್ಳತನ ಮಾಡಿರುವುದು.
ಇವರು ನಗರದ ಎನ್ಡಬ್ಲೂಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹಾವೇರಿ-ಹುಬ್ಬಳ್ಳಿ ಬಸ್ ನಿಲ್ಲುವ ಅಂಕಣದಲ್ಲಿ ಬಸ್ ಹತ್ತುತ್ತಿದ್ದಾಗ ಯಾರೋ ಖದೀಮರು ಚಿನ್ನದ ಮಾಂಗಲ್ಯಸರ ದೋಚಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.