ಸಂಸ್ಕಾರಯುತ ಜೀವನದಿಂದ ದೇಶದ ಅಭಿವೃದ್ಧಿ ಸಾಧ್ಯ; ಗಡ್ಡೆಪ್ಪ

ಪುಸ್ತಕ ಬಿಡುಗಡೆ
ಪುಸ್ತಕ ಬಿಡುಗಡೆ
Published on

ರಾಣೆಬೆನ್ನೂರ: ರಾಮಕೃಷ್ಣ ಪರಮಹಂಸರ ಬಗ್ಗೆ ಅರ್ಥೈಯಿಸಿಕೊಂಡು ಅವರ ಸಂಸತಿ ಸಂಸ್ಕಾರ ರೂಢಿಸಿಕೊಂಡಾಗ ಯುವಕರು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕಲು ಸಾಧ್ಯ. ಯುವಜನತೆ ಸಂಸ್ಕಾರಯುತ ಜೀವನ ನಡೆಸಿದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೆಸ್ಕಾಂ ಪೊಲೀಸ್ ಇನ್ಸಪೆಕ್ಟರ್ ಗಡ್ಡೆಪ್ಪ ಗುಂಜುಟಗಿ ಹೇಳಿದರು.

ಇಲ್ಲಿಯ ರಾಮಕೃಷ್ಣ ವಿವೇಕಾನಂದರ ಆಶ್ರಮದ ವತಿಯಿಂದ ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ಶ್ರೀರಾಮಕೃಷ್ಣ ವಿವೇಕಾನಂದ ಸಂಕಥನ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಮಕೃಷ್ಣ ಪರಮಹಂಸರು ಭಾರತದ ಪ್ರಸಿದ್ಧ ಧಾಮಿರ್ಕ ನೇತೃಗಳಲ್ಲಿ ಒಬ್ಬರು. ಅವರು ಅದ್ವೆ$ೈತ ವೇದಾಂತ ಸಿದ್ಧಾಂತವನ್ನು ಬೋಧಿಸಿದರು. ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ಅವರು ನಂಬಿದ್ದರು. ತಮ್ಮ ಜೀವನವನ್ನು ಕಠಿಣ ಧ್ಯಾನ ಮತ್ತು ತಪಸ್ಸಿನಲ್ಲಿ ಕಳೆದರು. ಅವರು ಸನಾತನ ಧರ್ಮವನ್ನು ಸಾಧನೆ ಮಾಡಿದಷ್ಟೇ ನಿಖರವಾಗಿ ಎಲ್ಲ ಧರ್ಮಗಳನ್ನೂ ಅನುಭವಿಸಿದರು. ಸತ್ಯಕ್ಕಾಗಿ ಏನನ್ನಾದರೂ ಸಹಿಸುವ ಶಕ್ತಿ ಹೊಂದಿದ್ದರು. ನಿಜವಾದ ಪ್ರೀತಿಯ ಎದುರಿಗೆ ಸಂಪ್ರದಾಯದ ಆಚಾರವನ್ನೆಲ್ಲ ಕಿತ್ತೊಗೆದರು ಎಂದರು.

ಗದಗ ಮಾಜಿ ಶಾಸಕ ಡಿ.ಆರ್. ಪಾಟೀಲ ಗ್ರಂಥ ಲೋಕಾರ್ಪಣೆಗೊಳಿಸಿದರು. ಬೆಳಗಾವಿ ದುರದುಂಡಿಶ್ವರ ಸಿದ್ಧಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೊಸಪೇಟೆ ಗೀತಾಶ್ರಮದ ಅಧ್ಯಕ್ಷ ಸ್ವಾಮಿ ಸುಮೇಧಾನಂದಜಿ ಮಹಾರಾಜ್ ಭಜನೆ ಮಾಡಿದರು. ಸ್ಥಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ನೇತೃತ್ವ ವಹಿಸಿದ್ದರು.

ಪ್ರಮುಖರಾದ ವೈದ್ಯ ಚಂದ್ರಶೇಖರ ಕೇಲಗಾರ, ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net