ತಾಲೂಕು ಆರೋಗ್ಯಾಧಿಕಾರಿ ಡಾ.ಝಡ್.ಆರ್.ಮಕಾಂದಾರ ಮಾತನಾಡಿ, ಈ ಮೊದಲು ಹಿರೇಕೆರೂರ ಹಾಗೂ ರಟ್ಟಿಹಳ್ಳಿಯ ಆಸ್ಪತ್ರೆಗಳಲ್ಲಿ 1 ಯಂತ್ರಕ್ಕೆ ದಿನಕ್ಕೆ 4 ಸಿಫ್ಟ್‌ನಂತೆ 2 ಡಯಾಲಿಸಿಸ್ ಯಂತ್ರಗಳಿಂದ ಕೇವಲ 8 ರೋಗಿಗಳಿಗೆ ಮಾತ್ರ ಡಯಾಲಿಸಿಸ್ ಮಾಡಲಾಗುತ್ತಿತ್ತು. ಶಾಸಕರ ಪ್ರಯತ್ನದಿಂದ ಈಗ ಮತ್ತೆ ಒಟ್ಟು 4 ಯಂತ್ರ ಹೊಸದಾಗಿ ಮಂಜೂರಾಗಿದ್ದು, ಇದರಿಂದ ಭಾನುವಾರ ರಜಾ ದಿನ ಹೊರತುಪಡಿಸಿ ಇನ್ಮುಂದೆ ಹಿರೇಕೆರೂರಿನಲ್ಲಿ 16 ಮತ್ತು ರಟ್ಟಿಹಳ್ಳಿಯಲ್ಲಿ 16 ಹೀಗೆ ದಿನಕ್ಕೆ ಒಟ್ಟು 32 ರೋಗಿಗಳಿಗೆ ಡಯಾಲಿಸಿಸ್ ಮಾಡಬಹುದಾಗಿದೆ ಎಂದು ತಿಳಿಸಿದರು.