ಪ್ರಾಥ:ಕಾಲ ಗುಗ್ಗಳ, ಸಂಜೆ ಮಂತ್ರೋಡಿ ಹಿರೇಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವ ಜರುಗಿತು. ನಂತರ, ಶಂಭಯ್ಯ ಹಿರೇಮಠ ಸಾರಥ್ಯದಲ್ಲಿ ಹರ್ಲಾಪೂರ ಗ್ರಾಮದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರದ ಸಿವೈಸಿಡಿ ಕಲಾತಂಡ ಅವರಿಂದ ಜಾಗೃತ ಜಾನಪದ ಕಾರ್ಯಕ್ರಮ ಜರುಗಿತು. ಕಾರಡಗಿ ಶ್ರೀ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ವೆಂಕಟರಾವ್ ಕುಲಕರ್ಣಿ ಹಾಗೂ ಪದಾಧಿಕಾರಿಗಳು, ಪ್ರಮುಖರು, ಭಕ್ತರು ಪಾಲ್ಗೊಂಡಿದ್ದರು.