ಮೂತ್ರ ವಿಸರ್ಜನೆ ಮಾಡುವುದೂ ತೊಂದರೆಯಾಗಿದ್ದರಿಂದ ಆತ್ಮಹತ್ಯೆ

Crime
Crime
Published on

ರಾಣೆಬೆನ್ನೂರು: ಮೂತ್ರ ವಿಸರ್ಜನೆ ಮಾಡುವುದು ತೊಂದರೆ ಆಗಿದ್ದರಿಂದ ವೃದ್ಧರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ.

ಉಜ್ಜಪ್ಪ ಬಸವಂತಪ್ಪ ಮರಿನಾಗಮ್ಮನವರ (72) ಮೃತ ವೃದ್ಧ.

ಇವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇದರಿಂದ ಮೂತ್ರವಿಸರ್ಜನೆ ಮಾಡುವುದು ತೊಂದರೆ ಆಗುತ್ತಿದ್ದ ಕಾರಣ ಮನನೊಂದು ಮನೆಯ ಪಕ್ಕದ ರೇಷ್ಮೆ ಗೂಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net