

ರಾಣೆಬೆನ್ನೂರ: ಇಲ್ಲಿಯ ಕುರುಬಗೇರಿ ಕ್ರಾಸ್ನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದ ಬ್ಯಾನರ್ ಅಳವಡಿಸಿದ ಕುರಿತು ನಗರಸಭೆ ಹಾಗೂ ಸಮಾಜದವರ ನಡುವೆ ವಾಗ್ವಾದ ನಡೆದ ಟನೆ ಬುಧವಾರ ನಡೆಯಿತು.
ಕುರುಬಗೇರಿ ಕ್ರಾಸ್ನಲ್ಲಿ ತರಳಬಾಳು ಹುಣ್ಣಿಮೆ ಕುರಿತು ಬ್ಯಾನರ್ ಅಳವಡಿಸಲಾಗಿತ್ತು. ಸ್ಥಳಕ್ಕೆ ಬಂದ ನಗರಸಭೆ ಅಧಿಕಾರಿಗಳು, ಬ್ಯಾನರ್ ಅಳವಡಿಸಲು ನಗರಸಭೆಯಿಂದ ಪರವಾನಗಿ ತೆಗೆದುಕೊಂಡಿಲ್ಲ. ಆದ್ದರಿಂದ ಬ್ಯಾನರ್ ತೆರವುಗೊಳಿಸಬೇಕು. ಇಲ್ಲವಾದರೆ ನಗರಸಭೆಯಿಂದ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಇದಕ್ಕೆ ಸಮಾಜದ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಆಗ ನಗರಸಭೆಯವರು ಬ್ಯಾನರ್ ತೆರವುಗೊಳಿಸಲು ಮುಂದಾದಾಗ ಇಬ್ಬರ ನಡುವೆ ಮಾತಿನ ವಾಗ್ವಾದ ನಡೆದು, ಸಮಾಜದ ಮುಖಂಡರು ರಸ್ತೆಯಲ್ಲಿ ಪ್ರತಿಭಟನೆಗೆ ಮುಂದಾದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಕಳುಹಿಸಿದರು.