Thieves Arrest ಟಗರು, ಆಡು ಕದಿಯುತ್ತಿದ್ದ ಇಬ್ಬರ ಬಂಧನ

ಕಳ್ಳರಿಂದ (Thieves Arrest) ವಶಪಡಿಸಿಕೊಂಡ ಬೈಕ್, ಟಗರು ಹಾಗೂ ಆಡುಗಳೊಂದಿಗೆ ಗುತ್ತಲದ ಪೊಲೀಸರು.
ಕಳ್ಳರಿಂದ (Thieves Arrest) ವಶಪಡಿಸಿಕೊಂಡ ಬೈಕ್, ಟಗರು ಹಾಗೂ ಆಡುಗಳೊಂದಿಗೆ ಗುತ್ತಲದ ಪೊಲೀಸರು.
Published on

ಆನ್​ಲೈನ್ ಬೆಟ್ಟಿಂಗ್ ಹಾಗೂ ಶೋಕಿಗಾಗಿ ಹಣ ಬೇಕಾಗಿದ್ದ ಕಾರಣಕ್ಕೆ ಗುತ್ತಲ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಟಗರು ಹಾಗೂ ಆಡುಗಳನ್ನು ಕಳ್ಳತನ ಮಾಡುತ್ತಿದ್ದ (Thieves Arrest) ಇಬ್ಬರನ್ನು ಗುತ್ತಲ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಎಂದು ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ ತಿಳಿಸಿದರು.

ಆನ್​ಲೈನ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರು ಆರೋಪಿಗಳು, ಹಣ ಕಡಿಮೆ ಬಿದ್ದಾಗ ಕಳ್ಳತನಕ್ಕೆ ಇಳಿಯುತ್ತಿದ್ದರು. ಬೆಟ್ಟಿಂಗ್ ಹಾಗೂ ಶೋಕಿಗೆ ಒಳಗಾಗಿದ್ದ ಬಂಧಿತರು, ಒಂಟಿ ಮನೆಗಳ ಮುಂದೆ ಅಥವಾ ಮನೆಗಳ ಅಕ್ಕಪಕ್ಕದಲ್ಲಿ ಕಟ್ಟಲಾಗುತ್ತಿದ್ದ ಟಗರು, ಆಡುಗಳನ್ನೇ ಕಳ್ಳತನ ಮಾಡುತ್ತಿದ್ದರು. ಅನೇಕ ದಿನಗಳಿಂದ ಕಳ್ಳತನ ಮಾಡುತ್ತಿದ್ದ ಇವರ ಬಗ್ಗೆ ಅನೇಕ ದಿನಗಳಿಂದ ಮಾಹಿತಿ ಕಲೆ ಹಾಕಿದ್ದ ನಮ್ಮ ಪೊಲೀಸರು ಮಂಗಳವಾರ ಖಚಿತ ಮಾಹಿತಿಯ ಮೇರೆಗೆ ಚೌಡಯ್ಯದಾನಪುರ ಕ್ರಾಸ್ ಬಳಿ ನಮ್ಮ ಮಾಲು ಸಮೇತ ಬಂಧಿಸಿದ್ದಾರೆ ಎಂದರು.
ಸಿಪಿಐ ಸಿದ್ಧಾರೂಢ ಬಡಿಗೇರ, ಪಿಎಸ್​ಐ ಪರಶುರಾಮ ಲಮಾಣಿ, ಪೇದೆಗಳಾದ ರವಿ ಕಲಾಲ, ಮಹಾನಂದ ಪಸಗಿ, ರವಿಯಪ್ಪ, ಗುಡ್ಡಪ್ಪ ಬಳ್ಳಾರಿ, ಸಿ.ಎಂ. ಕೋರೆಪ್ಪನವರ ಸೇರಿದಂತೆ ಅನೇಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net