

ಹಿರೇಕೆರೂರ: ಚಲಿಸುತ್ತಿದ್ದ ಟ್ರ್ಯಾಕ್ಟರ್ ನಿಂದ ಬಿದ್ದ ಮಹಿಳೆ ಮೇಲೆ ಟ್ರ್ಯಾಕ್ಟರ್ ನ ಗಾಲಿ ಹರಿದು ಮೃತಪಟ್ಟ ಘಟನೆ ತಾಲೂಕಿನ ಹಂಸಬಾವಿ-ಕಾರಗಿ ರಸ್ತೆಯಲ್ಲಿ ನಡೆದಿದೆ.
ಹಾನಗಲ್ಲ ತಾಲೂಕಿನ ಬ್ಯಾಗ್ವಾದಿ ಗ್ರಾಮದ ಲಲಿತವ್ವ ಮೂಕಪ್ಪ ಬುಳ್ಳಣ್ಣನವರ (43) ಮೃತ ಮಹಿಳೆ.
ಇವರು ಟ್ರ್ಯಾಕ್ಟರ್ ಮೇಲೆ ಕುಳಿತು ಹಂಸಬಾವಿ ಗ್ರಾಮದಿಂದ ಕಾರಗಿ ಗ್ರಾಮಕ್ಕೆ ತೆರಳುತ್ತಿದ್ದ ಸಮಯದಲ್ಲಿ ಟ್ರ್ಯಾಕ್ಟರ್ ಜೋರಾಗಿ ಹೊರಟಿದ್ದ ಕಾರಣ ಕೆಳಗೆ ಬಿದ್ದಿದ್ದಾರೆ. ಇದರಿಂದ ಗಾಲಿ ಅವರ ಮೇಲೆ ಹರಿದು ಮೃತಪಟ್ಟಿದ್ದಾರೆ. ಈ ಕುರಿತು ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.