ಶಿಗ್ಗಾಂವ: ಟಿಪ್ಪರ್ ಲಾರಿ ಹರಿದು ಪಾದಚಾರಿ ಮೃತಪಟ್ಟ ಘಟನೆ ಗಂಗೆಬಾವಿ ಸೇತುವೆ ಬಳಿ ನಡೆದಿದೆ.
ಪಟ್ಟಣದ ಮೆಹಬೂಬ ನಗರದ ಬಸವರಾಜ ಶಾಂತಪ್ಪ ಹುಳ್ಳಿ (45) ಮೃತ ಪಾದಚಾರಿ.
ಈತ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಈ ಕುರಿತು ಶಿಗ್ಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.