Cut the throat ಕತ್ತು ಕೊಯ್ದುಕೊಳ್ಳಲು ಮುಂದಾದ ಕಳವು ಆರೋಪಿ

ಹಾನಗಲ್ಲ ತಾಲೂಕಿನ ಚಿಕ್ಕಾಂಶಿಹೊಸೂರಿನ ಚಿನ್ನದ ಅಂಗಡಿಯಲ್ಲಿ ಸ್ಥಳ ಮಹಜರ್​ ವೇಳೆ ಕತ್ತು ಕೊಯ್ದುಕೊಳ್ಳಲು (Cut the throat) ಮುಂದಾದ ಕಳವು ಪ್ರಕರಣದಆರೋಪಿ
ಹಾನಗಲ್ಲ ತಾಲೂಕಿನ ಚಿಕ್ಕಾಂಶಿಹೊಸೂರಿನ ಚಿನ್ನದ ಅಂಗಡಿಯಲ್ಲಿ ಸ್ಥಳ ಮಹಜರ್​ ವೇಳೆ ಕತ್ತು ಕೊಯ್ದುಕೊಳ್ಳಲು (Cut the throat) ಮುಂದಾದ ಕಳವು ಪ್ರಕರಣದಆರೋಪಿ
Published on
ಹಾನಗಲ್ಲ: ತಾಲೂಕಿನ ಚಿಕ್ಕಾಂಶಿಹೊಸೂರಿನಲ್ಲಿ ನಡೆದಿದ್ದ ಚಿನ್ನದ ಅಂಗಡಿ ಕಳ್ಳತನ ಪ್ರಕರಣದ ಸ್ಥಳ ಮಹಜರಿಗೆ ಕರೆದುಕೊಂಡು ಬಂದ ವೇಳೆ ಆರೋಪಿಯೊಬ್ಬ ಕತ್ತು ಕೊಯ್ದುಕೊಳ್ಳಲು (Cut the throat) ಮುಂದಾದ ಟನೆ ಬುಧವಾರ ನಡೆದಿದೆ.
ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವರಾಜ ಮೊಡಕೇರ ಹಾಗೂ ಅಶೋಕ ಅಲಿಯಾಸ್​ ರಮೇಶ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಪಂಚನಾಮೆಗಾಗಿ ಅಂಗಡಿಗೆ ಕರೆತಂದಿದ್ದರು. ಈ ವೇಳೆ ಜನರನ್ನು ಕಂಡ ಆರೋಪಿಯೊಬ್ಬ ಚಿನ್ನದ ಅಂಗಡಿಯಲ್ಲಿ ಬಿದ್ದಿದ್ದ ಗ್ಲಾಸ್​ ಚೂರಿನಿಂದಲೇ ಕತ್ತು ಕೊಯ್ದುಕೊಳ್ಳಲು ಮುಂದಾಗಿ ಪೊಲೀಸರನ್ನು ಹೆದರಿಸಲು ಯತ್ನಿಸಿದ್ದಾನೆ. ಪೊಲೀಸರ ಮುಂದೆಯೇ ಆರೋಪಿಗಳು ಸಿನಿಮೀಯ ಮಾದರಿಯಲ್ಲಿ ಕುತ್ತಿಗೆ ಕೊಯ್ದುಕೊಳ್ಳುವ ಬೆದರಿಕೆ ಒಡ್ಡಿದ್ದಾರೆ. ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ದರೋಡೆ ಆರೋಪಿಗಳ ಈ ಡ್ರಾಮಾ ನೋಡಿ ಬೆಚ್ಚಿಬಿದ್ದ ಗ್ರಾಮಸ್ಥರು, ಆರೋಪಿಗಳನ್ನು ಸರಿಯಾಗಿ ಬೆಂಡೆತ್ತುವಂತೆ ಕೂಗಿರುವುದೂ ಮೊಬೈಲ್​ನಲ್ಲಿ ಸೆರೆಯಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನದ ಅಂಗಡಿ ದರೋಡೆ ಮಾಡಿದ್ದ 8 ಜನರ ಗ್ಯಾಂಗ್​ ಪತ್ತೆ ಹಚ್ಚಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಬಂಧಿತರಿಂದ 1.15 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net