ಸರಣಿ ಮನೆಗಳ್ಳತನ ಮಾಡಿದ್ದ ಇಬ್ಬರು ಆರೋಪಿಗಳು ಕಂಬಿ ಹಿಂದೆ

ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು
Published on

ಹಾವೇರಿ: ನಗರದಲ್ಲಿ ಸರಣಿ ಮನೆಗಳ್ಳತನ ಮಾಡಿದ್ದ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಇಲ್ಲಿಯ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ದಾವಣಗೆರೆ ನಗರದ ಸಿದ್ದರಾಮೇಶ್ವರ ಬಡಾವಣೆಯ ನಿವಾಸಿಗಳಾದ ಗುಜರಿ ಇರ್ಫಾನ್ ಫಜಲುಸಾಬ (35) ಹಾಗೂ ಲಂಬು ದಾದಾಪೀರ ಫಜಲುಸಾಬ (34) ಬಂಧಿತ ಆರೋಪಿಗಳು.

ಬಂಧಿತರಿಂದ 2.27 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2 ಲಕ್ಷ ರೂ. ಮೌಲ್ಯದ 1 ಆಟೋರೀಕ್ಷಾ, ಮೊಬೈಲ್ ಸೇರಿ ಒಟ್ಟು 4.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಆರೋಪಿತರು ನಗರದ ನಾಗೇಂದ್ರಮಟ್ಟಿಯಲ್ಲಿ ಒಂದೇ ದಿನ ಎರಡ್ಮೂರು ಮನೆಗಳನ್ನು ಕಳ್ಳತನ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸ್ಪಿ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಶಹರ ಠಾಣೆ ಸಿಪಿಐ ಮೋತಿಲಾಲ ಪವಾರ, ಪಿಎಸ್ಐ ನಾಗರಾಜ ಟಿ.ಎಂ., ಎನ್.ಎನ್. ಶಿಶುವಿನಹಾಳ, ಎಂ.ಜಿ. ವಗ್ಗಣ್ಣವರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net