ಮನೆಗೆ ನುಗ್ಗಿ ನಗನಾಣ್ಯ ಕಳ್ಳತನ

ಸವಣೂರ ತಾಲೂಕು ಕಳಲಕೊಂಡ ಗ್ರಾಮದಲ್ಲಿ ಕಳ್ಳತನವಾದ ಹಿರೇಮಠ ಸಹೋದರರ ಮನೆಗೆ ಬುಧವಾರ ಎಎಸ್ಪಿ ಲಕ್ಷ್ಮಣ ಶಿರಕೋಳ ಭೇಟಿ ನೀಡಿ ಪರಿಶೀಲನೆ ಕೈಗೊಂಡರು.
ಸವಣೂರ ತಾಲೂಕು ಕಳಲಕೊಂಡ ಗ್ರಾಮದಲ್ಲಿ ಕಳ್ಳತನವಾದ ಹಿರೇಮಠ ಸಹೋದರರ ಮನೆಗೆ ಬುಧವಾರ ಎಎಸ್ಪಿ ಲಕ್ಷ್ಮಣ ಶಿರಕೋಳ ಭೇಟಿ ನೀಡಿ ಪರಿಶೀಲನೆ ಕೈಗೊಂಡರು.
Published on
ಸವಣೂರ: ಬೇಸಿಗೆಯ ತಾಪಕ್ಕೆ ಮನೆಯ ಮೇಲೆ ಮಲಗಿದ್ದ ವೇಳೆ ಕಳ್ಳರು ಮನೆಗೆ ನುಗ್ಗಿ ನಗನಾಣ್ಯ ಕಳ್ಳತನ ಮಾಡಿದ ಘಟನೆ ತಾಲೂಕಿನ ಕಳಲಕೊಂಡ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ವಿಜಯಕುಮಾರ ವಿರುಪಾಕ್ಷಪ್ಪ ಹಿರೇಮಠ ಹಾಗೂ ಸಿದ್ಧಲಿಂಗಸ್ವಾಮಿ ವಿರುಪಾಕ್ಷಪ್ಪ ಹಿರೇಮಠ ಸಹೋದರರ ಮನೆಯಲ್ಲಿದ್ದ 12.40 ಲಕ್ಷ ರೂ. ಮೌಲ್ಯದ ಚಿನ್ನ, 9600 ರೂ. ಮೌಲ್ಯದ ಬೆಳ್ಳಿ ಆಭರಣ ಹಾಗೂ 5 ಲಕ್ಷ ರೂ. ನಗದು ಕಳ್ಳತನ ಮಾಡಲಾಗಿದೆ. ಬೆಳಗ್ಗೆ ಎದ್ದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸವಣೂರ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಪಿ.ಐ ತಿಮ್ಮಣ್ಣ ಚಾಮನೂರ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಕಳ್ಳರ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಘಟನಾ ಸ್ಥಳಕ್ಕೆ ಎ.ಎಸ್.ಪಿ ಲಕ್ಷ್ಮಣ ಶಿರಕೋಳ ಆಗಮಿಸಿ, ಪರಿಶೀಲನೆ ಕೈಗೊಂಡು ತ್ವರಿತಗತಿಯಲ್ಲಿ ಕಾರ್ಯಾಚರಣೆ ಕೈಗೊಂಡು ಶೀಘ್ರ ಕಳ್ಳರನ್ನು ಪತ್ತೆ ಹಚ್ಚಲು ಸೂಚಿಸಿದರು.
ಬೆಳೆ ಮಾರಿದ ಹಣ: ಸವಣೂರ ಪಟ್ಟಣದ ಕರ್ನಾಟಕ ಬ್ಯಾಂಕ್‌ನಲ್ಲಿಯ ಬೆಳೆ ಸಾಲ ತುಂಬಲು ಗೋವಿನ ಜೋಳ ಮತ್ತು ಸೋಯಾ ಅವರೆ ಮಾರಿದ ಹಣ ಮತ್ತು ಗೆಳೆಯ ಹಾಗೂ ಸಹೋದರಿಯ ಬಳಿ ಕೈಗಡ ಸಾಲವಾಗಿ ಪಡಿದಿದ್ದ 5 ಲಕ್ಷ ನಗದನ್ನು ಮನೆಯಲ್ಲಿ ಇರಿಸಲಾಗಿತ್ತು. 12 ಬಂಗಾರದ ಆಭರಣ 5 ತೊಲೆ ಬೆಳ್ಳಿ ಆಭರಣ ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಎಎಸ್‌ಐ ರಂಗನಾಥ ಅಂತರಗಟ್ಟಿ, ಶಂಕರಗೌಡ ಪೊಲೀಸ್‌ಗೌಡ್ರ, ಸಿಬ್ಬಂದಿ ಬಸವರಾಜ ಲಮಾಣಿ, ಎ.ಎಚ್ ನದಾಫ್, ಮಹೇಶ ಕೇಲೂರ ಹಾಗೂ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net