ಪಟ್ಟಣದ ಶಾಸಕರ ಮಾದರಿ ಶಾಲೆಯ ಮೈದಾನದಲ್ಲಿ ಪರಿವರ್ತನಾ ಕಲಿಕಾ ಕೇಂದ್ರ ಶನಿವಾರ ಆಯೋಜಿಸಿದ್ದ ಹಾನಗಲ್ಲ ತಾಲೂಕಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಬಿಇಡಿ, ಸ್ನಾತಕೋತ್ತರ ಹಾಗೂ ಎನ್ಎಂಎಂಎಸ್ ಟಾಪರ್ ವಿದ್ಯಾಥಿರ್ಗಳು ಹಾಗೂ 3ನೇ ವರ್ಷದ ಸಾಧನಾ ಸಂಭ್ರಮದಲ್ಲಿ ತಾಲೂಕಿನ 375 ವಿದ್ಯಾಥಿರ್ಗಳನ್ನು ಗೌರವಿಸಿ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು. ಭಾರತೀಯರ ಬುದ್ಧಿವಂತಿಕೆಗೆಗೆ ಜಗತ್ತೇ ಬೆರಗಾಗಿದೆ. ಅಮೆರಿಕಾ ಬೆಳವಣಿಗೆಯಲ್ಲಿ ಭಾರತೀಯ ಬುದ್ಧಿವಂತಿಕೆ ಕೆಲಸ ಮಾಡಿದೆ. ಆದರೆ, ನೆರೆ ದೇಶಗಳು ಭಾರತದ ಪ್ರಗತಿ ಕುಂಠಿತಗೊಳಿಸುವ ಹುನ್ನಾರದಲ್ಲಿವೆ. ವಿದೇಶಿ ಷಡ್ಯಂತ್ರಕ್ಕೆ ಬಲಿಯಾಗುವುದು ಬೇಡ. ನಾವು ಕೃಷಿ ೇತ್ರದಲ್ಲಿಯೂ ಅಭಿವೃದ್ಧಿ ಪಥದತ್ತ ಸಾಗುವ ಅಗತ್ಯವಿದೆ. ಸಮಾಜದ ಪ್ರೇರಣೆ, ಸಹಾಯ, ಸಹಕಾರದಿಂದ ಉನ್ನತ ಸ್ಥಾನಮಾನಗಳನ್ನು ತಮ್ಮದಾಗಿಸಿಕೊಂಡವರು ಅದರ ಕೊಡುಗೆಯಾಗಿ ಸಮಾಜಕ್ಕೆ ಸಹಾಯ ಮಾಡಬೇಕು ಎಂದ ಅವರು, ಗ್ರಾಮೀಣ ಮಕ್ಕಳಿಗೆ ಉನ್ನತ ಶೈಣಿಕ ವ್ಯವಸ್ಥೆ ಕಲ್ಪಿಸುವುದು ನನ್ನ ಆದ್ಯತೆ. ಅದಕ್ಕಾಗಿ ನಾನು ಬದ್ಧ ಎಂದರು.