ರಟ್ಟಿಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದಲ್ಲಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ Gavisiddheshwara Swamiji ಮಾತನಾಡಿದರು.
Published on:
Copied
Follow Us
ರಟ್ಟಿಹಳ್ಳಿ: ಪುಣ್ಯದ ಕೆಲಸ ಮಾಡಿದರೆ ಪುಣ್ಯ ನಿಮ್ಮನ್ನು ಕಾಯುತ್ತದೆ. ಮಠಗಳಿಗೆ ಬಂಗಾರದ ಕಳಸ ಮಾಡಿಕೊಟ್ಟರೆ ಮಾತ್ರ ದೊಡ್ಡ ಭಕ್ತನಲ್ಲ. ಮಠದ ಹೊರಗೆ ಕಸಗೂಡಿಸಿದವನೂ ಕೂಡ ದೊಡ್ಡ ಭಕ್ತನೇ. ಸಾಕಷ್ಟು ಸಂಪತ್ತು ಇದ್ದವರು ಶ್ರೀಮಂತರಲ್ಲ. ಕೈ, ಕಾಲು ಗಟ್ಟಿ ಇದ್ದು ಉತ್ತಮ ಆರೋಗ್ಯ good health ಹೊಂದಿ ದುಡಿಯುವ ಶಕ್ತಿ ಇದ್ದರೆ ಅವನೇ ಶ್ರೀಮಂತ ಎಂದು ಕೊಪ್ಪಳದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದಲ್ಲಿ ಶ್ರೀ ಗುರು ಮೂಕಪ್ಪ ಶಿವಯೋಗಿಗಳವರ 88ನೇ ಹಾಗೂ ಲಿಂ.ಶ್ರೀ ವಿರೂಪಾಕ್ಷ ಸ್ವಾಮೀಜಿ ಅವರ 2ನೇ ಪುಣ್ಯಸ್ಮರಣೆಯ ಅಂಗವಾಗಿ ಜಾತ್ರಾ ಮಹೋತ್ಸವ ಹಾಗೂ ಅಮೃತ ಮಹೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಜನ ಜಾಗೃತಿ ಧರ್ಮಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಿಕ್ಸ್ ಪ್ಯಾಕ್ ಪಡೆಯುವುದಕ್ಕೆ ಜಿಮ್‍ಗೆ ಹೋಗುವುದು ಮುಖ್ಯವಲ್ಲ. ಸಿಗರೇಟ್ ಪ್ಯಾಕ್ ಕೈಬಿಟ್ಟರೆ ಸಿಕ್ಸ್ ಪ್ಯಾಕ್ ಬರುತ್ತದೆ. ಕೆಲವರು ಮುಪ್ಪು ಮುಚ್ಚಿಕೊಳ್ಳಲು ಕಸರತ್ತು ನಡೆಸುತ್ತಾರೆ.(ಬ್ಯೂಟಿಪಾರ್ಲರ್‍ಗೆ ಹೋಗುತ್ತಾರೆ) ಎಷ್ಟೇ ಪ್ರಯತ್ನ ಮಾಡಿದರೂ ಶರೀರ ಇಚ್ಛೆಯಂತೆ ನಡೆಯಲ್ಲ. ರಸ್ತೆ ಪಕ್ಕದಲ್ಲಿರುವ ಕಿ.ಮೀ. ತೋರಿಸುವ ಕಲ್ಲು ಊರಿನ ದಾರಿ ಮತ್ತು ದೂರವನ್ನು ತೋರಿಸುತ್ತದೆ. ಪ್ರತಿಯೊಬ್ಬರು ಜೀವನದ ದಾರಿ ಮತ್ತು ಬದುಕಿನ ಬಗ್ಗೆ ವಿಚಾರ ಮಾಡಬೇಕು. ಪರರ ಹಿತ ಬಯಸುವವರ ಜೀವನ ಸಾರ್ಥಕವಾಗುತ್ತದೆ ಎಂದರು.
ಜೀವನದಲ್ಲಿ ಆಲಸ್ಯವನ್ನು ಬಿಡಬೇಕು. ಮಠಗಳಲ್ಲಿ ನಡೆಯುವ ಸತ್ಕಾರದ ಕಾರ್ಯಗಳಿಗೆ ಕರೆಯದೆ ಹೋಗಬೇಕು. ಮನುಷ್ಯನ ಮನಸು ಶುದ್ಧವಾಗಿರಬೇಕು. ದೇವರು ಕೊಟ್ಟ ಶರೀರವನ್ನು ಜೋಪಾನವಾಗಿಟ್ಟುಕೊಳ್ಳಬೇಕು ಎಂದರು.
ತಿಪ್ಪಾಯಿಕೊಪ್ಪ ಮಠದ ಶ್ರೀ ಮಹಾಂತ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮನಗುಂಡಿ ಮಹಾಮನೆಯ ಗುರುಬಸವ ಶ್ರೀ ಬಸವಾನಂದ ಸ್ವಾಮೀಜಿ, ಮೂಲೆಗದ್ದಿ ಅಭಿನವ ಚನ್ನಬಸವ ಸ್ವಾಮೀಜಿ, ಹಿರೇಹಡಗಲಿ ಗವಿಮಠದ ಹಿರಿಯ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಯು.ಬಿ.ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ.ಸಿ.ಪಾಟೀಲ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಓಡಿಸ್ಸಾ ಹೈಕೋರ್ಟ್ ನ್ಯಾಯಾ„ೀಶ ಕೃಷ್ಣ ಎಸ್. ದೀಕ್ಷಿತ, ಸಾಹಿತಿ ಡಾ.ನಿಂಗಪ್ಪ ಚಳಗೇರಿ, ನಿವೃತ್ತ ಜಿಲ್ಲಾ„ಕಾರಿ ವಿ.ಪಿ. ಇಕ್ಕೇರಿ, ಕುಮಾರಗೌಡ್ರ, ಭರತ ಬೊಮ್ಮಾಯಿ, ಇತರರು ಉಪಸ್ಥಿತರಿದ್ದರು.