ಶಿಗ್ಗಾಂವ ತಾಲೂಕಿನ ಹೊಸೂರು ಗ್ರಾಮದ ರೈತರ ಜಮೀನಿನಲ್ಲಿದ್ದ ಸೋಲಾರ್ ಪ್ಲಾಂಟ್ ಪ್ಯಾನಲ್ (solar panel) ಒಡೆದಿರುವುದನ್ನು ಪೊಲೀಸರು ಪರಿಶೀಲಿಸಿದರು.
Published on:
Copied
Follow Us
ಶಿಗ್ಗಾಂವ: ರೈತರ ಜಮೀನಿನಲ್ಲಿ ಅಳವಡಿಸಿದ್ದ 7.5 ಎಚ್ಪಿ ಸಾಮರ್ಥ್ಯದ ಸೋಲಾರ್ ಪ್ಲಾಂಟ್ ಪ್ಯಾನಲ್ (solar panel) ಪ್ಲೇಟ್ಗಳನ್ನು ಕಿಡಿಗೇಡಿಗಳು ಒಡೆದು ಹಾಕಿರುವ ಘಟನೆ ತಾಲೂಕಿನ ಹೊಸೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ರೈತ ಯಲ್ಲಪ್ಪ ಹೊಸಮನೆ ಅವರು ತಮ್ಮ 4.15 ಎಕರೆ ಜಮೀನಿನಲ್ಲಿನ ಕೊಳವೆಬಾವಿಗೆ 7.5 ಎಚ್ಪಿ ಸಾಮರ್ಥ್ಯದ ಸೋಲಾರ್ ಪ್ಲಾಂಟ್ ಅಳವಡಿಸಿಕೊಂಡಿದ್ದರು. ಜು. 17 ರಂದು ತಡರಾತ್ರಿ ಕಿಡಿಗೇಡಿಗಳು ಸೋಲಾರ್ ಪ್ಯಾನಲ್ಗಳನ್ನು ಒಡೆದು ಹಾಕಿದ್ದಾರೆ. ತಡಸ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.