ಮಲಗುಂಡಿಯಲ್ಲಿ ಇಳಿದು ಇಬ್ಬರು ಕೆಲಸಗಾರರು ಬಕೆಟ್ ಮತ್ತಿತರ ಸಾಮಗ್ರಿಗಳಿಂದ ಮಲ ಹೊರಗೆ ತೆಗೆದು ಪಕ್ಕದ ತಿಪ್ಪೆಯಲ್ಲಿ ಸಂಗ್ರಹಿಸುವ ಕಾರ್ಯ ಮಾಡುತ್ತಿದ್ದರು. ನಿಷೇಧಿತ ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿ ಇನ್ನೂ ಜೀವಂತವಾಗಿರುವ ಘಟನೆ ಹಾನಗಲ್ಲ ತಾಲೂಕಿನಲ್ಲಿ ನಡೆದಿರುವುದು ಜನ ತಲೆ ತಗ್ಗಿಸುವಂಥದಾಗಿದ್ದು, ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ರಾಜು ಕೆಳಗಿನಮನೆ ಹಾಗೂ ಪ್ರಶಾಂತ ಕೆಳಗಿನಮನೆ ಅವರನ್ನು ಆಡೂರು ಪಿಎಸ್‌ಐ ಶರಣಪ್ಪ ಹಂಡ್ರಗಲ್ ಅವರ ವಶಕ್ಕೆ ನೀಡಲಾಯಿತು.