ಟೆಂಪೋ ಟ್ರಾವಲರ್ ಗೆ ಇನೋವಾ ಡಿಕ್ಕಿ; ಓರ್ವ ಸಾವು

Crime
Crime
Published on

ಶಿಗ್ಗಾಂವಿ: ಟೆಂಪೋ ಟ್ರಾವಲರ್ಗೆ ಇನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಟೆಂಪೋದಲ್ಲಿದ್ದ ಓರ್ವ ಮೃತಪಟ್ಟ ಘಟನೆ ತಾಲೂಕಿನ ಗಾಯತ್ರಿ ತಪೋಭೂಮಿ ಬಳಿ ರಾಷ್ಟ್ರೀಯ ಹೆದ್ಧಾರಿ-48ರಲ್ಲಿ ನಡೆದಿದೆ.

ದಾವಣಗೆರೆ ನಗರದ ಅಲಿಮಾಹೀಮ್ ಮಹ್ಮದರಫೀಕ್ (20) ಮೃತ ಯುವಕ.

ಇವರು ಟೆಂಪೋ ಟ್ರಾವಲರ್ ವಾಹನದಲ್ಲಿ ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಸಮಯದಲ್ಲಿ ಟೆಂಪೋ ಟ್ರಾವರಲ್ ಚಾಲಕ ಯಾವುದೆ ಸಿಗ್ನಲ್ ನೀಡದೆ ವಾಹನವನ್ನು ನಿಲ್ಲಿಸಿದ್ದಾನೆ. ಆಗ ಹಿಂದೆಯಿಂದ ಬಂದ ಇನೋವಾ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅಲಿಮಾಹೀಮ್ ಮೃತಪಟ್ಟಿದ್ದಾನೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net