ಶಿಕ್ಷಕಿ ವಿರುದ್ಧ ಮಕ್ಕಳ ರಕ್ಷಣಾ ಆಯೋಗದಿಂದ ಸ್ವಯಂ ಪ್ರೇರಿತ ದೂರು

ಶಿಕ್ಷಕಿ
ಶಿಕ್ಷಕಿ
Published on

ರಾಣೆಬೆನ್ನೂರ: ಕಾಲೇಜ್ ಫೀಸ್ ಕಟ್ಟಿಲ್ಲವೆಂದು ವಿದ್ಯಾರ್ಥಿನಿಗೆ ಪರೀಕ್ಷೆ ಪ್ರವೇಶ ಪತ್ರ ನೀಡಲು ಸತಾಯಿಸಿದ ಶಿಕ್ಷಕಿ ವಿರುದ್ಧ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

ದ್ವೀತಿಯ ಪಿಯು ವಿದ್ಯಾರ್ಥಿನಿ ವಾರ್ಷಿಕ ಪರೀಕ್ಷೆ ಬರೆಯಲು ಬಂದಾಗ ಪರೀಕ್ಷಾ ಕೊಠಡಿಗೆ ಬಿಡದೆ ಶಿಕ್ಷಕಿ ಸುನಿತಾ ಡಿ.ಬಿ. ಎಂಬುವರು 30 ಸಾವಿರ ರೂ. ಕಾಲೇಜ್ ಶುಲ್ಕ ಬಾಕಿಯಿದ್ದು ಅದನ್ನು ತುಂಬಿದರೆ ಮಾತ್ರ ಅನುಮತಿ ನೀಡುವುದಾಗಿ ಹೇಳಿದ್ದರು.

ವಿದ್ಯಾಥಿರ್ನಿಯ ಸಂಬಂಧಿಕರು ತಮ್ಮ ಬೈಕ್ಅನ್ನು ಅಡವಿಟ್ಟು ಆಡಳಿತ ಮಂಡಳಿಗೆ 30 ಸಾವಿರ ಕಾಲೇಜು ಶುಲ್ಕ್ ಪಾವತಿಸಿದ ನಂತರ ವಿದ್ಯಾಥಿರ್ನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಅಲ್ಲದೆ, ಶಾಲೆಯ ಶಿಕ್ಷಕಿಯಾದ ಸುನೀತಾ ಡಿ.ಬಿ. ಆಡಿರುವ ದರ್ಪದ ಮಾತುಗಳ ಸಂಬಂಧದ ಬಗ್ಗೆಯೂ ಆಕ್ಷೇಪಣೆ ವ್ಯಕ್ತವಾಗಿದೆ.

ಆದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಯವರು ಖುದ್ದು ಗಮನ ಹರಿಸಿ ಪರೀಕ್ಷಾ ಸಮಯದಲ್ಲಿ ವಿದ್ಯಾಥಿರ್ನಿಯ ಶೈಕ್ಷಣಿಕ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸಿದ ಶಾಲೆಯ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಶಿಕ್ಷಕಿಯ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಕೈಗೊಂಡ ಕ್ರಮದ ಕುರಿತು 5 ದಿನದಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net